ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಭಾರತದೊಂದಿಗೆ ಚರ್ಚಿಸಲು ಸಿದ್ಧ: ನಾವು ಹಣವನ್ನು ಶಸ್ತ್ರಾಸ್ತ್ರ ಪೇರಿಸಿಡುವ ಬದಲು ಬಡತನ ನಿವಾರಣೆಗಾಗಿ ಬಳಸೋಣ- ಇಮ್ರಾನ್ ಖಾನ್

0
201

ಬಿಷ್‍ಕೇಕ್, ಜೂ. 14: ಅಂತಾರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆಯಲ್ಲಿ ಭಾರತದೊಂದಿಗೆ ಚರ್ಚಿಸಲು ಸಿದ್ಧ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಕಿರ್ಗಿಸ್ಥಾನದ ಬಿಷ್ಕೆಕ್‍ನಲ್ಲಿ ಶಾಂಗೈ ಸಹಕಾರಿ ಒಕ್ಕೂಟ (ಎಸ್‍ಸಿ0) ಶೃಂಗದಲ್ಲಿ ರಷ್ಯದ ಸುದ್ದಿಸಂಸ್ಥೆ ಸ್ಪುಟ್ನಿಕ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನೆರೆದೇಶ ಭಾರತದೊಂದಿಗೆ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ಪಾಕಿಸ್ತಾನ ಸಿದ್ಧವಿದೆ. ಸೈನಿಕ ಕ್ರಮಗಳ ಮೂಲಕ ಇದರ ಪರಿಹಾರಕ್ಕೆ ಯತ್ನಿಸುವುದು ತಿಳಿಗೇಡಿತನವಾಗಿದೆ ಎಂದು ಅವರು ಹೇಳಿದರು. ಅನವಶ್ಯಕವಾಗಿ ಆಯುಧಗಳನ್ನು ಪೇರಿಸಿಡಲು ಪಾಕಿಸ್ತಾನ ಬಯಸುವುದಿಲ್ಲ. ಬದಲಾಗಿ ಜನರ ಅಭಿವೃದ್ಧಿಗಾಗಿ ಹೆಚ್ಚು ಹಣವನ್ನು ಎರಡು ದೇಶಗಳಿಗೆ ಖರ್ಚು ಮಾಡಲು ಸಾಧ್ಯವಿದೆ. ಈ ವಿಷಯವನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದು ಇಮ್ರಾನ್ ಖಾನ್ ಹೇಳಿದರು. ಎರಡು ದೇಶಗಳ ನಡುವೆ ಮೂರು ಯುದ್ಧಗಳು ನಡೆದಿವೆ. ಎರಡು ಕಡೆಯಲ್ಲಿಯೂ ನಷ್ಟ ಆಗಿವೆ. ಜಗತ್ತಿನಲ್ಲಿ ಬಡತನ ಎದುರಿಸುತ್ತಿರುವ ಪಟ್ಟಿಯಲ್ಲಿ ಭಾರತ ಉಪಖಂಡ ಸೇರಿದೆ. ಜನರಿಗೆ ಬೆದರಿಕೆಯಾಗಿರುವ ಬಡತನ ಇಲ್ಲವಾಗಿಸಲು ಹಣ ವ್ಯಯಿಸಬೇಕಾಗಿದೆ. ಇದು ನನ್ನ ನಿಲುವೆಂದು ಇಮ್ರಾನ್ ಹೇಳಿದರು.

ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಕಾಶ್ಮೀರ ವಿಷಯದಲ್ಲಿ ಭಾರತದೊಂದಿಗೆ ಪ್ರಧಾನ ಭಿನ್ನಾಭಿಪ್ರಾಯ ಇದೆ. ಎರಡು ದೇಶದ ನಾಯಕರು ಮತ್ತು ಸರಕಾರಗಳು ತೀರ್ಮಾನಿಸಿದರೆ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಆದರೆ ಈಗ ಎರಡು ದೇಶಗಳ ನಡುವೆ ಇರುವ ಸಂಬಂಧ ಉತ್ತಮವಾಗಿಲ್ಲ. ಚುನಾವಣೆಯಲ್ಲಿ ಸಿಕ್ಕಿರುವ ಭಾರೀ ಗೆಲುವು ಎರಡು ದೇಶಗಳ ಸಂಬಂಧವನ್ನು ಶಕ್ತಗೊಳಿಸಲು ಭಾರತದ ಪ್ರಧಾನಿ ಉಪಯೋಗಿಸಬೇಕು. ಹಾಗೆ ಮಾಡುತ್ತಾರೆ ಎನ್ನುವ ವಿಶ್ವಾಸ ತನಗಿದೆ ಎಂದು ಇಮ್ರಾನ್ ಖಾನ್ ಹೇಳಿದರು.