ಯುರೋಪ್‌ನ ಇಸ್ಲಾಮೋಫೋಬಿಯಾದ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಗ್ಗಟ್ಟಾಗಬೇಕು: ವಿವಿಧ ರಾಷ್ಟ್ರಗಳಿಗೆ ಪತ್ರ ಬರೆದ ಪಾಕ್ ಪ್ರಧಾನಿ

0
403

ಸನ್ಮಾರ್ಗ ವಾರ್ತೆ

ಯುರೋಪಿನಲ್ಲಿ ವೃದ್ಧಿಸುತ್ತಿರುವ ಇಸ್ಲಾಮೋಫೋಬಿಯಾ ವಿರುದ್ಧ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿವಿಧ ರಾಷ್ಟ್ರಗಳಿಗೆ ಪತ್ರ ಬರೆದಿದ್ದಾರೆ.

ಪಾಶ್ಚಾತ್ಯ ಜಗತ್ತಿನಲ್ಲಿ ಅದರಲ್ಲೂ ಯುರೋಪಿನಲ್ಲಿ ಇಸ್ಲಾಮೋಫೋಬಿಯಾ ವರ್ಧಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಹಲವಾರು ಸಾವು-ನೋವು ಗಳಿಗೆ ಕಾರಣವಾಗುವ ಪಾಶ್ಚಾತ್ಯ ರಾಷ್ಟ್ರಗಳ ಚಲನೆಗಳ ವಿರುದ್ಧ ಮುಸ್ಲಿಂ ರಾಷ್ಟ್ರಗಳೆಲ್ಲಾ ಒಗ್ಗೂಡಿ ಉಪಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಬರೆದಿದ್ದಾರೆ.

ಜಗತ್ತಿನ ವಿವಿಧ ಧಾರ್ಮಿಕ-ಸಾಮಾಜಿಕ ವಿಭಾಗಗಳ ನಡುವಿನ ಮೌಲ್ಯ ವಿಭಿನ್ನವಾಗಿದೆ ಎಂಬುದನ್ನು ನಾವು ಮನಗಾಣಬೇಕು. ಮುಸ್ಲಿಂ ವಿಭಾಗಕ್ಕೂ ಸಮಾನವಾದ ಸ್ಥಾನ ನೀಡಬೇಕೆಂಬ ಧಾರಣೆ ಪಾಶ್ಚಾತ್ಯ ಜಗತ್ತಿನಲ್ಲಿ ಉಂಟುಮಾಡಬೇಕಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಕಾಶ್ಮೀರದ ವಿಚಾರವೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚೈನಾದ ಉಯಿಘರ್ ಮುಸ್ಲಿಮರ ದುರಂತ ಪರಿಸ್ಥಿತಿಯ ಬಗ್ಗೆ, ತನ್ನದೇ ದೇಶದ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಭದ್ರತೆಯ ಬಗ್ಗೆಯೂ ಪತ್ರದಲ್ಲಿ ಮಾತೆತ್ತಲಿಲ್ಲ.