ಪೆರಿಯಡ್ಕ: ಐಎಮ್‌ಡಬ್ಯೂಎ ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ವನಮಹೋತ್ಸವ ಆಚರಣೆ

0
67

ಉಪ್ಪಿನಂಗಡಿ: ಇತ್ತಿಫಾಕುಲ್ ಮುಸ್ಲಿಮಿನ್ ವೆಲ್ಫೇರ್ ಅಸೋಸಿಯೇಷನ್ ಪೆರಿಯಡ್ಕ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವನಮಹೋತ್ಸವ ಮತ್ತು ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 15 ರಂದು ಬೆಳಿಗ್ಗೆ ಪೆರಿಯಡ್ಕ ಮೊಹಿಯುದ್ದಿನ್ ಜುಮಾ ಮಸೀದಿ ವಠಾರದಲ್ಲಿ ಜರುಗಿತು.

ಕಾರ್ಯಕ್ರಮನ್ನು ಉದ್ಘಾಟಿಸುವ ಮೂಲಕ ಮಸೀದಿಯ ಖತೀಬರಾದ ಇಬ್ರಾಹಿಂ ಫೈಝಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಭ್ಸರ ಹಯಾತುಲ್ ಇಸ್ಲಾಂ ಮದ್ರಸ ಪೆರಿಯಡ್ಕ ಕಿರಾಅತ್ ಪಠಿಸಿದರು. ಅಧ್ಯಕ್ಷತೆ ಮತ್ತು ಧ್ವಜಾರೋಹಣವನ್ನು ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ಲಾ ಟೈಲರ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಮುಸ್ಲಿಯರ್ ಐಎಮ್‌ಡಬ್ಯೂಎ ಗೌರವಾಧ್ಯಕ್ಷರು, ಮುಸ್ತಫ ಹೆಚ್‌ಎಸ್‌ಎ ಮಾಜಿ ಅಧ್ಯಕ್ಷರು, ಲತೀಫ್ ಹೆಚ್‌ಎಸ್‌ಎ ಅಧ್ಯಕ್ಷರು, ಝಕರಿಯ್ಯಾ ಯು.ಕೆ ಉದ್ಯಮಿಗಳು ಪೆರಿಯಡ್ಕ ಆಗಮಿಸಿದ್ದರು.

ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಲತೀಫ್, ಹೆಚ್‌ಎಸ್‌ಎ ಅಧ್ಯಕ್ಷರು ಹಾಗೂ ಖತೀಬರಾದ ಇಬ್ರಾಹಿಂ ಫೈಝಿವರು ಉದ್ಘಾಟಿಸಿದರು. ವನಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಸ್ಥಳೀಯ ಉದ್ಯಮಿಗಳು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುಸ್ಲಿಯಾರ್ ಅವರ ಮುಖಾಂತರ ಪ್ರದೇಶ ನಿವಾಸಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಐಎಮ್‌ಡಬ್ಯೂಎ ಕಾರ್ಯದರ್ಶಿ ಮೈಸೀದ್.ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here