ಅಮೇಠಿಯಲ್ಲಿ ರಾಹುಲ್ ಸೋಲಿನೆಡೆಗೆ, ವಯನಾಡಿನಲ್ಲಿ ವಿಜಯದೆಡೆಗೆ

0
74

ಹೊಸದಿಲ್ಲಿ,ಮೇ 23: ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮøತಿ ಇರಾನಿ, ರಾಹುಲ್‍ಗಾಂಧಿ ವಿರುದ್ಧ ಎರಡೂ ಸಾವಿರಕ್ಕೂ ಅಧಿಕ ಮತಗಳಿಂದ ಹಿಂದಿಕ್ಕಿ ಮುನ್ನಡೆಗಳಿಸಿದ್ದಾರೆ. ಇದೇವೇಳೆ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಭಾರೀ ಮುನ್ನಡೆಗಳಿಸಿ ವಿಜಯದತ್ತ ದಾಪುಗಾಲಿಕ್ಕಿದ್ದಾರೆ. ಉತ್ತರಪ್ರದೇಶದ ಅಝಮ್ ಗಡದಿಂದ ಅಖಿಲೇಶ್ ಯಾದವ್ ಮುನ್ನಡೆ ಗಳಿಸಿದ್ದರೆ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಮೈನಿಪುರಿಯಲ್ಲಿ ಹಿನ್ನಡೆಯಲ್ಲಿದ್ದಾರೆ. ಭೋಪಾಲದಲ್ಲಿ ಪ್ರಜ್ಞಾಸಿಂಗ್ ಠಾಕೂರ್ ಕಾಂಗ್ರೆಸ್‍ನ ದಿಗ್ವಿಜಯ್ ಸಿಂಗ್ ವಿರುದ್ಧ ಭಾರೀ ಅಂತರದ ಮುನ್ನಡೆ ಗಳಿಸಿದ್ದಾರೆ.

ಕ್ರಿಕೆಟಿಗ ಗೌತಂ ಗಂಭೀರ್ ದಿಲ್ಲಿಯಿಂದ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ. ಅಸ್ಸಾಮ್‍ನಲ್ಲಿ ಬದ್ರುದ್ದೀನ್ ಅಜ್ಮಲ್ ಮುನ್ನಡೆ ಗಳಿಸಿದರೆ ಬಿಹಾರದಲ್ಲಿ ಕೇಂದ್ರ ಸಚಿವ ರವಿಶಂಕರ್ ವಿರುದ್ಧ ಶತ್ರುಘ್ನ ಸಿನ್ಹಾ ಭಾರೀ ಅಂತರದ ಜಯಗಳಿಸುವತ್ತ ಸಾಗಿದ್ದಾರೆ. ಕರ್ನಾಟಕ ಕಲಬುರ್ಗಿಯಲ್ಲಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಲಿನ ದವಡೆಗೆ ಸಿಲುಕಿದ್ದಾರೆ. ಈ ಸಲ ಎನ್‍ಡಿಎ ಅದರಲ್ಲೂ ಬಿಜೆಪಿ ವಿಪಕ್ಷಗಳನ್ನು ಧೂಳೀಪಟಗೊಳಿಸಿದ್ದು ಲೋಕಸಭಾ ಫಲಿತಾಂಶದ ಆಧಾರದಲ್ಲಿ ಕರ್ನಾಟಕದ ರಾಜ್ಯ ಸರಕಾರ ಮೇಲೆ ಅಪಾಯದ ತೂಗು ಕತ್ತಿ ನೇತಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ವರದಿಯಾಗಿರುವ ಪ್ರಕಾರ ಕರ್ನಾಟಕದ ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರು ಫಲಿತಾಂಶದಿಂದ ಬೆಚ್ಚಿ ಬಿದ್ದು ತೆರೆಯ ಮರೆಗೆ ಸರಿಯುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನೊಳಗೆ ಗುಂಪುಗಾರಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಶುಕ್ರವಾರವೇ ರಾಜ್ಯ ಸರಕಾರ ಕುಸಿಯಲಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿಕೆ ನೀಡಿದ್ದು ಗಮನಾರ್ಹವಾಗಿದೆ.