ಮತ ಎಣಿಕೆಯಲ್ಲಿ ಅಕ್ರಮ ಆರೋಪ: ಆರ್‌ಜೆಡಿ ಕೋರ್ಟಿಗೆ

0
634

ಸನ್ಮಾರ್ಗ ವಾರ್ತೆ

ಪಾಟ್ನ,ನ.11: ಬಿಹಾರದ ಚುನಾವಣೆಯಲ್ಲಿ ಬುಡಮೇಲು ನಡೆದಿದೆ ಎಂದು ಆರೋಪಿಸಿ ಮಹಾಸಖ್ಯ ಕೋರ್ಟಿನ ಮೊರೆಹೋಗಲಿದೆ ಎಂದು ವರದಿಗಳು ತಿಳಿಸಿವೆ. ಪಾಟ್ನಾ ಹೈಕೋರ್ಟಿಗೆ ಅಥವಾ ಸುಪ್ರೀಂಕೋರ್ಟಿಗೆ ದೂರು ನೀಡಲು ಆರ್‌ಜೆಡಿ ನೇತೃತ್ವದ ಮಹಾಘಟ್‍ಬಂಧನ್‍ನಲ್ಲಿ ಚಿಂತನೆ ನಡೆಯುತ್ತಿದೆ.

ಕಾನೂನು ತಜ್ಞರೊಂದಿಗೆ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರ್‌ಜೆಡಿ ತಿಳಿಸಿತು. ಮತ ಎಣಿಕೆಯಲ್ಲಿ ಹನ್ನೆರಡು ಸೀಟುಗಳಲ್ಲಿ ಬುಡಮೇಲು ನಡೆದಿದೆ ಎಂದು ಆರ್‌ಜೆಡಿ ಹೇಳುತ್ತಿದೆ.

500ಕ್ಕೂ ಕಡಿಮೆ ಮತಗಳಿಂದ ಇಲ್ಲಿ ಆರ್‌ಜೆಡಿ ಸೋಲನುಭವಿಸಿದ್ದು ಮರು ಮತ ಎಣಿಕೆಯ ಕೋರಿಕೆಯನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ಆದ್ದರಿಂದ ಆರ್‌ಜೆಡಿ ಕೋರ್ಟಿನ ಕದಬಡಿಯಲು ಸಿದ್ಧವಾಗಿದೆ. 119 ಸೀಟುಗಳಲ್ಲಿ ಗೆಲುವು ಸಿಕ್ಕಿದೆ ಎಂದು ಆರ್‍ಜೆಡಿ ಒಂದು ಪಟ್ಟಿಯನ್ನೂ ಹೊರಬಿಟ್ಟಿತ್ತು.

ಬಿಹಾರದ ಮತ ಎಣಿಕೆಯಲ್ಲಿ ಬುಡಮೇಲು ನಡೆಯುತ್ತಿದೆ ಎಂದು ಆರ್‍ಜೆಡಿ ಮಂಗಳವಾರ ರಾತ್ರೆಯೇ ದೂರು ನೀಡಿತ್ತು. ಆದರೆ ಆರೋಪವನ್ನು ಚುನಾವಣಾ ಆಯೋಗ ನಿರಾಕರಿಸಿತ್ತು. ಕಾಂಗ್ರೆಸ್ ಕೂಡ ಇದೇ ಆರೋಪವನ್ನು ಮಾಡಿದೆ.