ಭಾರತ: ಎಲ್‍ಟಿಟಿಇ ನಿಷೇಧ ಐದು ವರ್ಷ ವಿಸ್ತರಣೆ

0
69

ಹೊಸದಿಲ್ಲಿ,ಮೇ 15: ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಕೊಲೆಯ ನಂತರ ನಿಷೇಧ ಹೇರಲಾಗಿದ್ದ ಲಿಬರೇಶನ್ ಟೈಗರ್ಸ್ ಫ್ರಂಟ್ ಆಫ್ ತಮಿಳ್ ಈಳಂ (ಎಲ್‍ಟಿಟಿಇ) ನಿಷೇಧ ಅವಧಿಯನ್ನು ಭಾರತ ಸರಕಾರ ಐದು ವರ್ಷ ವಿಸ್ತರಿಸಿದೆ. 1967ರ ಕಾನೂನು ಬಾಹಿರ ಚಟುವಟಿಕೆ ನಿಷೇಧ ಕಾಯಿದೆ ಪ್ರಕಾರ ಗೃಹ ಸಚಿವಾಲಯ ನಿಷೇಧ ಹೇರಿತ್ತು. ಭಾರತದ ಒಂದು ವಿಭಾಗ ತಮಿಳರ ಬೆಂಬಲದಲ್ಲಿ ಎಲ್‌ಟಿಟಿಇ ಶ್ರೀಲಂಕಾದಲ್ಲಿ ರೂಪುಗೊಂಡಿತ್ತು. ಸೈನಿಕ ಸಂಘಟನೆಯ ಸ್ವಭಾವವಿದ್ದ ಈ ಭಯೋತ್ಪಾದಕ ರಾಜಕೀಯ ಪಕ್ಷ ಶ್ರೀಲಂಕದಲ್ಲಿ ಪ್ರತ್ಯೇಕ ದೇಶ ಸ್ಥಾಪನೆಯ ಉದ್ದೇಶದೊಂದಿಗೆ ಚಟುವಟಿಕೆ ನಡೆಸಿತ್ತು. ಎಲ್‍ಟಿಟಿಇ ಪ್ರಭಾಕರನ್ ಎಂಬಾತನ ನೇತೃತ್ವದಲ್ಲಿ ಸ್ಥಾಪನೆಯಾಗಿತ್ತು. ರಾಜೀವ್ ಗಾಂಧಿ ಹತ್ಯೆಯ 1991ರ ಬಳಿಕ ಸಂಘಟನೆಗೆ ನಿಷೇಧ ಮುಂದುವರಿಯುತ್ತಿದೆ.