ಕುಲ್‍ಭೂಷಣ್ ಜಾಧವ್‍ ಪರ ವಕೀಲರನ್ನು ನೇಮಿಸುವಲ್ಲಿ ಭಾರತ ವಿಫಲವಾಗಿದೆ- ಪಾಕ್ ಹೇಳಿಕೆ

0
357

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್,ಅ.7: ಭಯೋತ್ಪಾದನೆ, ಬೇಹುಗಾರಿಕೆ ಆರೋಪ ಹೊರಿಸಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ತುತ್ತಾಗಿ ಜೈಲಿನಲ್ಲಿರುವ ಭಾರತದ ಮಾಜಿ ನೌಕಾದಳ ಅಧಿಕಾರಿ ಕುಲ್‍ಭೂಷಣ್ ಜಾಧವ್‍ರಿಗೆ(55) ಭಾರತ ವಕೀಲರನ್ನು ನೇಮಕಗೊಳಿಸಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಮಂಗಳವಾರ ಕಾನೂನು ಸಚಿವಾಲಯ ಈ ವಿಷಯವನ್ನು ತಿಳಿಸಿದೆ. ಜಾಧವ್‍ರಿಗೆ ವಕೀಲರನ್ನು ನೇಮಿಸಲು ಅಕ್ಟೋಬರ್ 6 ವರೆಗೆ ಕೋರ್ಟು ಸಮಯ ನೀಡಿತ್ತು.

ಇದೇವೇಳೆ, ಸ್ವತಂತ್ರ, ಪಾರದರ್ಶಕ ವಿಚಾರಣೆಗಾಗಿ ಜಾಧವ್‍ರಿಗೆ ಭಾರತದ ವಕೀಲರನ್ನು ಅನುಮತಿಸಬೇಕೆಂದು ವಿದೇಶ ಸಚಿವಾಲಯ ಹೇಳಿತ್ತು. ಪಾಕಿಸ್ತಾನ ನಿರಾಕರಿಸಿತ್ತು. ಭಾರತ ವಕೀಲರ ನೇಮಕಾತಿಗೆ ವಿಫಲವಾಗಿದೆ ಎಂದು ಕೋರ್ಟು ಜಾಧವ್‍ರಿಗೆ ವಕೀಲರನ್ನು ನೇಮಿಸಬೇಕೆಂದು ಸಚಿವಾಲಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಅತ್ತಾರ್ ಮಿನಲ್ಲಾಹ್ ಅಧ್ಯಕ್ಷತೆಯ ವಿಭಾಗೀಯ ಪೀಠಕ್ಕೆ ಮನವಿ ಮಾಡಿದೆ.

ಭಾರತದ ಒಪ್ಪಿಗೆಯಿಲ್ಲದೆ ಕೋರ್ಟು ಜಾಧವ್‍ರಿಗೆ ವಕೀಲರನ್ನು ಗೊತ್ತುಪಡಿಸಿದರೆ ಅದರ ಪರಿಣಾಮ ಏನಾಗಬಹುದೆಂದು ಚೀಫ್ ಜಸ್ಟಿಸ್ ಅಟಾರ್ನಿ ಜನರಲ್‍ರನ್ನು ಕೇಳಿತು. ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶಕ್ಕೆ ಇಂತಹೊಂದು ನೇಮಕಾತಿಗೆ ಮನ್ನಣೆ ಇದೆಯೇ ಎಂದು ಕೋರ್ಟು ಪ್ರಶ್ನಿಸಿದ್ದು, ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿದೆ.

2017ರ ಎಪ್ರಿಲ್‍ನಲ್ಲಿ ಪಾಕಿಸ್ತಾನದ ಸೈನಿಕ ಕೋರ್ಟು ಜಾಧವ್‍ರಿಗೆ ಮರಣದಂಡನೆ ಶಿಕ್ಷೆಯ ತೀರ್ಪು ನೀಡಿತ್ತು. ನಂತರ ಜಾಧವ್ ಪರ ಭಾರತ ಅಂತಾರಾಷ್ಟ್ರೀಯ ನ್ಯಾಯಾಲದಲ್ಲಿ ಮರುವಿಚಾರಣಾ ಆದೇಶವನ್ನು ಪಡೆದುಕೊಂಡಿತ್ತು.