ಇತಿಹಾಸದಲ್ಲಿಯೇ ಮೊದಲ ಬಾರಿ ಬೃಹತ್ ಆರ್ಥಿಕ ಮಾಂದ್ಯ ಎದುರಿಸಿದ ಭಾರತ: ಆರ್‌ಬಿಐ

0
9047

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.12: ಭಾರತದ ಅರ್ಥವ್ಯವಸ್ಥೆ ಇತಿಹಾಸದಲ್ಲಿ ಮೊದಲನೇ ಬಾರಿ ದೊಡ್ಡ ಮಟ್ಟದ ಮಾಂದ್ಯವನ್ನು ಎದುರಿಸುತ್ತಿದೆ. ಆರ್ಥಿಕ ವರ್ಷದ ಎರಡನೆ ಪಾದದಲ್ಲಿ ಜೆಡಿಪಿಯಲ್ಲಿ ಶೇ.8.6ರಷ್ಟು ಕುಸಿತದ ಲೆಕ್ಕಗಳು ಬಂದಿದ್ದು ಈ ನಂತರ ಅರ್ಥವ್ಯವಸ್ಥೆ ಮಾಂದ್ಯವನ್ನು ಅನುಭವಿಸುತ್ತಿದೆ ಎಂದು ಆರ್‌ಬಿಐ ತಿಳಿಸಿದೆ. ಎಪ್ರಿಲ್-ಜೂನ್ ಅವಧಿಯ ಆರ್ಥಿಕ ವರ್ಷದ ಪ್ರಥಮ ಪಾದದಲ್ಲಿ ಶೇ.23ರಷ್ಟು ಜಿಡಿಪಿ ಕುಸಿತ ದಾಖಲಿಸಿದೆ.

ಆರ್‌ಬಿಐ ಡೆಪ್ಯುಟಿ ಗವರ್ನರ್ ಮೈಕಲ್ ಪಾತ್ರ ಸಹಿತ ಅರ್ಥ ಶಾಸ್ತ್ರಜ್ಞರ ಅಧ್ಯಯನದಲ್ಲಿ ಇದು ಬೆಳಕಿಗೆ ಬಂದಿದೆ. ಮಾರಾಟ ಕಡಿಮೆಯಾದಾಗಲೂ ಕಂಪೆನಿಯ ಲಾಭವಾಗಲು ಖರ್ಚು ಕಡಿಮೆ ಮಾಡಿದ್ದು ಕಾರಣವೆಂದು ಆರ್‌ಬಿಐ ತಿಳಿಸಿದೆ. ಇದೇ ವೇಳೆ, ವಾಹನ ಮಾರಾಟದ ಲೆಕ್ಕಗಳು, ಬ್ಯಾಂಕುಗಳ ಲಿಕ್ವಿಡಿಟಿಯು ಭಾರತದ ಅರ್ಥವ್ಯವಸ್ಥೆಯ ಚೇತರಿಕೆಯ ಸೂಚನೆಗಳನ್ನು ನೀಡುತ್ತಿದೆ ಎಂದು ಆರ್‌ಬಿಐ ತಿಳಿಸಿದೆ. ಆರ್ಥಿಕ ವರ್ಷದ ಮೂರನೇ ಪಾದದಲ್ಲಿ ಭಾರತದ ಅರ್ಥವ್ಯವಸ್ಥೆ ಚೇತರಿಸುವ ನಿರೀಕ್ಷೆಯನ್ನು ಆರ್‌ಬಿಐ ವ್ಯಕ್ತಪಡಿಸಿದೆ.

ಆದರೆ, ಯುರೋಪ್ ಸಹಿತ ದೇಶಗಳಲ್ಲಿ ಕೊರೋನದ ಎರಡನೆ ಹರಡುವಿಕೆಯಿಂದಾಗಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದೋರಬಹುದು. ಇದು ಭಾರತಕ್ಕೂ ದೊಡ್ಡ ಹಿನ್ನಡೆಯನ್ನು ತಂದುಕೊಡಬಹುದು.