ಪ್ರಶ್ನೆಗಳು, ಚರ್ಚೆಗಳಿಗೆ ಅನುಮತಿ ನೀಡದ ವಿಶೇಷ ಪ್ರಜಾಪ್ರಭುತ್ವ ಇರುವ ದೇಶ ‘ಭಾರತ’- ಪಿ. ಚಿದಂಬರಂ

0
447

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಪ್ರಶ್ನೆ ಕೇಳಲು, ಚರ್ಚೆಗಳಿಗೆ ಅನುಮತಿ ನೀಡದ ಒಂದು ವಿಶೇಷ ರೀತಿಯ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಇರುವ ದೇಶವಾಗಿ ‘ಭಾರತ’ ಪರಿವರ್ತಿತವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದರು.

ಲಡಾಕ್ ವಿಷಯದಲ್ಲಿ ಪಾರ್ಲಿಮೆಂಟಿನಲ್ಲಿ ಪ್ರಶ್ನೋತ್ತರ ಕೇಳುವ ಅನುಮತಿ ನಿರಾಕರಿಸಿದ್ದನ್ನು ಬೆಟ್ಟು ಮಾಡಿ ಚಿದಂಬರಂ ಅಪಹಾಸ್ಯದಿಂದ ಕೂಡಿದ ಟ್ವೀಟ್ ಮಾಡಿದ್ದಾರೆ.

ಪೂರ್ವ ಲಡಾಕ್‍ನಲ್ಲಿ ಚೀನದೊಂದಿಗಿನ ಗಡಿ ಘರ್ಷಣೆಯ ಕುರಿತು ಪ್ರಧಾನಿ ಮತ್ತು ರಾಜನಾ್ಥ ಸಿಂಗ್‍ರ ಹೇಳಿಕೆಯ ನಂತರ ಕಾಂಗ್ರೆಸ್‍ಗೆ ಮಾತಾಡಲು ಅವಕಾಶ ಕೊಡಲಿಲ್ಲ. ನಂತರ ಕಾಂಗ್ರೆಸ್ ನಾಯಕರು ಲೋಕಸಭೆಯನ್ನು ಬಹಿಷ್ಕರಿಸಿ ಪಾರ್ಲಿಮೆಂಟ್ ಹೌಸ್ ಸಮುಚ್ಚಯದ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ವಲಸೆ ಕಾರ್ಮಿಕರ ವಿಷಯದಲ್ಲಿ ಕೇಂದ್ರ ಸ್ವೀಕರಿಸಿದ ನಿಲುವನ್ನು ಚಿದಂಬರಂ ಟೀಕಿಸಿದರು. “ಊರಿಗೆ ಮರಳಿದವರು. ದಾರಿಯಲ್ಲಿ, ಮನೆಗೆ ಬಂದ ಮೇಲೆ ಮೃತಪಟ್ಟ ವಲಸೆ ಕಾರ್ಮಿಕರ ಮಾಹಿತಿಯನ್ನು ತೆಗೆದಿರಿಸಿಕೊಳ್ಳದ ಒಂದು ರೀತಿಯ ವಿಶೇಷ ದೇಶ ಭಾರತ ಎನಿಸಿಕೊಂಡಿದೆ” ಎಂದು ಅವರು ಹೇಳಿದರು.

ಭಾರತದ ಆರ್ಥಿಕ ಕ್ಷೇತ ಎದುರಿಸುತ್ತಿರುವ ಕುಸಿತವನ್ನೂ ಚಿದಂಬರಂ ಲೇವಡಿ ಮಾಡಿದರು. ಆರ್ಥಿಕ ಕ್ಷೇತ್ರ ಅತ್ಯಾಧುನಿಕ ಬೆಳವಣಿಗೆ ಕಂಡ ದೇಶ ಭಾರತವಾಗಿದೆ. ಮೂರು ತಿಂಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆ ಸಾಧಿಸುವ ದೇಶವಾಗಿ ಬದಲಾಗಲು ಸಾಧ್ಯವಾಗಿರುವ ಅದ್ಭುತ ದೇಶ ಭಾರತವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.