ಜಾಗತಿಕ ಹಸಿವು ಸೂಚಿಯಲ್ಲಿ ಭಾರತಕ್ಕೆ 94ನೇ ಸ್ಥಾನ

0
179

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅತ್ಯಂತ ಭಯಾನಕ ಹಸಿವಿನಲ್ಲಿ ದೇಶ ಬಳಲುತ್ತಿದೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್(ಜಾಗತಿಕ ಹಸಿವು ಸೂಚಿ) ತಿಳಿಸಿದೆ. 107 ದೇಶಗಳ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾಗಳ ಪರಿಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ. ಭಾರತದ ಒಂದು ದೊಡ್ಡ ಜನ ವಿಭಾಗಕ್ಕೆ ಅಗತ್ಯ ಆಹಾರ ವಸ್ತುಗಳು ಲಭಿಸುವುದಿಲ್ಲ ಎಂದು ಲೆಕ್ಕಗಳು ಸೂಚಿಸುತ್ತಿವೆ. ಪೋಷಕಾಹಾರ ಕೊರತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ಸಾವಿನ ದರ ಪ್ರಕಾರ ಜಾಗತಿಕ ಹಸಿವು ಸೂಚಿ ತಯಾರಿಸಲಾಗುತ್ತಿದೆ.

ಪಟ್ಟಿಯಲ್ಲಿ ನೇಪಾಳ 73ನೇ ಸ್ಥಾನ, ಬಾಂಗ್ಲಾದೇಶ 75ನೇ ಸ್ಥಾನವಿದೆ. ಪಾಕಿಸ್ತಾನಕ್ಕೆ 88ನೇ ಸ್ಥಾನವಿದೆ. ಬಾಂಗ್ಲಾದೇಶಕ್ಕೆ 75ನೇ ಸ್ಥಾನವಿದೆ. ನೇಪಾಳ 73ನೇ ಸ್ಥಾನವನ್ನು ಹೊಂದಿದೆ. ಉತ್ತರ ಕೊರಿಯ, ರುವಾಂಡ , ನೈಜಿರೀಯ, ಅಫ್ಘಾನಿಸ್ತಾನ, ಸಿಯೊರ ಲಿಯೊನ್ ಅತ್ಯಂತ ತೀವ್ರ ಹಸಿವಿನ ಬೇಗೆಯಿಂದ ಬಳಲುತ್ತಿದೆ. ಇದೇ ವೇಳೆ 2019ರ ಪಟ್ಟಿಗಿಂತ ಎಂಟು ಸ್ಥಾನ ಉತ್ತಮಗೊಂಡಿದೆ. ಕಳೆದ ವರ್ಷ 117 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 102 ನೇಸ್ಥಾನವಿತ್ತು.

ದಕ್ಷಿಣ ಏಷ್ಯ, ಸಹಾರದ ದಕ್ಷಿಣದ ಆಫ್ರಿಕನ್ ದೇಶಗಳು ಅತ್ಯಂತ ಹಸಿವಿನ ಪರಿಸ್ಥಿತಿಯಲ್ಲಿ ಜನರು ಬದುಕು ಸಾಗಿಸುತ್ತಿದ್ದಾರೆ ಎಂದು ಹಂಗರ್ ಇಂಡೆಕ್ಸ್ ಸೂಚಿಸುತ್ತಿದೆ. ಪಟ್ಟಿಯಲ್ಲಿ ಭಾರತದ ಇಂಡೆಕ್ಸ್ ಸ್ಕೋರ್ 27.2 ಆಗಿದೆ. ಇದು ಗಂಭೀರ ವಿಭಾಗದಲ್ಲಿ ಸೇರಿದೆ. ದೇಶದ ಜನಸಂಖ್ಯೆಯಲ್ಲಿ ಶೇ 14ರಷ್ಟು ಜನರು ಅಂದರೆ 18 ಕೋಟಿಗಿಂತ ಹೆಚ್ಚು ಜನರು ಹಸಿವಿನಲ್ಲಿದ್ದಾರೆ ಎಂದು ಸೂಚಿ ತಿಳಿಸುತ್ತಿದೆ. ದೇಶದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ ದರ ಶೇ. 37.4 ಆಗಿದೆ. ಇದೇವೇಳೆ, ಐದು ವರ್ಷದ ಕೆಳಗಿನ ಮಕ್ಕಳ ಸಾವಿನ ದರ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಮತ್ತು ಇತರ ಏಜೆನ್ಸಿಗಳ ವಿವರಗಳನ್ನು ಸಂಗ್ರಹಿಸಿ ಸೂಚಿಯನ್ನು ತಯಾರಿಸಲಾಗುತ್ತಿದೆ. 2000 ನಂತರ ಜಗತ್ತಿನಾದ್ಯಂತ ಹಸಿವಿನ ಸಂಸ್ಯೆ ಕಡಿಮೆಯಾಗುತ್ತಿದೆ ಆದರೂ ಹಲವು ಕಡೆ ಹಸಿವಿನ ತೀವ್ರತೆ ಹೆಚ್ಚಿದೆ ಎಂದು ಸೂಚಿ ತಿಳಿಸಿದೆ.