ಜಾಗತಿಕ ಕೋವಿಡ್-19 ಗಂಭೀರ ಪ್ರಕರಣಗಳಲ್ಲಿ ಭಾರತಕ್ಕೆ ಎರಡನೆಯ ಸ್ಥಾನ

0
109

ಸನ್ಮಾರ್ಗ ವಾರ್ತೆ

ನವದೆಹಲಿ,ಆ.2: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 17,80,268ಕ್ಕೆ ಏರಿದೆ. ಪ್ರಸ್ತುತ ದೇಶದಲ್ಲಿ 5.76 ಲಕ್ಷ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಸುಮಾರು 9 ಸಾವಿರ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಗಂಭೀರ ಪ್ರಕರಣಗಳಿರುವ ದೇಶಗಳ ಪೈಕಿ ಭಾರತವು ಎರಡನೇ ಸ್ಥಾನದಲ್ಲಿದೆ. ಅಮೇರಿಕ 18,720 ಗಂಭೀರ ರೋಗಿಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ ಮತ್ತು ಬ್ರೆಜಿಲ್ 8,318 ರೋಗಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂಬುದಾಗಿ ಹಿಂದಿ ದೈನಿಕವೊಂದು ವರದಿ ಮಾಡಿದೆ.

ಭಾರತದಲ್ಲಿ ಪ್ರತಿ 200 ಸೋಂಕಿತ ರೋಗಿಗಳಲ್ಲಿ ಪೈಕಿ 3 ಜನರ ಸ್ಥಿತಿ ಗಂಭೀರವಾಗಿದೆ. ಅಮೇರಿಕದಲ್ಲಿ 200 ರೋಗಿಗಳಲ್ಲಿ ಸುಮಾರು 2 ಮತ್ತು ಬ್ರೆಜಿಲ್‌ನಲ್ಲಿ ಓರ್ವ ಸೋಂಕಿತನ ಸ್ಥಿತಿ ಗಂಭೀರವಾಗಿದೆ.

ದೇಶದಲ್ಲಿ ಶನಿವಾರ 54,865 ಪ್ರಕರಣಗಳು ವರದಿಯಾಗಿದ್ದು, 51,232 ರೋಗಿಗಳು ಗುಣಮುಖವಾಗಿದ್ದಾರೆ. 852 ಜನರು ಸಾವನ್ನಪ್ಪಿದ್ದಾರೆ. 2889 ಸಕ್ರಿಯ ಪ್ರಕರಣಗಳು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವನ್ನು ಕಂಡಿವೆ. ಇದಕ್ಕೂ ಮೊದಲು ಜುಲೈ 2 ರಂದು 1570 ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದವು. ಸೋಂಕಿತರ ಸಂಖ್ಯೆ ಸತತ 3 ದಿನಗಳಿಂದ 54 ಸಾವಿರಕ್ಕಿಂತಲೂ ಹೆಚ್ಚಾಗಿ ಕಂಡು ಬರುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here