ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್: ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

0
991

ಸನ್ಮಾರ್ಗ ವಾರ್ತೆ

ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಟಾಸ್ ಗಳಿಸಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಭಾರತದ ಉತ್ತಮ ಬೌಲಿಂಗ್ ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 195 ಕ್ಕೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ಮೊದಲಿಗೆ ವಿಕೆಟ್ ಕಳೆದುಕೊಂಡರೂ ಕೂಡಾ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ನಾಯಕ ಅಜಿಂಕ್ಯ ರಹಾನೆ ಶತಕ ದಾಖಲಿಸಿ ರವೀಂದ್ರ ಜಡೇಜರೊಂದಿಗೆ ಉತ್ತಮ ಜೊತೆಯಾಟ ನಡೆಸಿದರು. ಅಜಿಂಕ್ಯ ರಹಾನೆ 112 ರನ್ ಗಳಿಸಿ ಔಟಾದರೆ ಜಡೇಜಾ 57 ರನ್ ಮಾಡಿ ಅರ್ಧಶತಕ ಗಳಿಸಿದರು. ಬಳಿಕ ಭಾರತ ಒಟ್ಟು 326 ರನ್ ಗಳಿಸಿ ಆಲೌಟಾದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್ ಗಳ ಮುನ್ನಡೆ ಸಾಧಿಸಿ, ಆಸ್ಟ್ರೇಲಿಯಾವನ್ನು ಎರಡನೇ ಇನ್ನಿಂಗ್ಸ್ ಗೆ ಬ್ಯಾಟಿಂಗ್ ಇಳಿಸಿತು.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಬುಮ್ರಾ ಬೌಲಿಂಗ್ ಗೆ ರನ್ ಮಾಡಲು ಪರದಾಡಿದ ಆಸ್ಟ್ರೇಲಿಯಾ ತಂಡವು 200 ರನ್ ಗೆ ಆಲೌಟ್ ಆದ್ದರಿಂದ ಕೇವಲ 70 ರನ್ ಗಳ‌ ಗುರಿ ನೀಡಲಷ್ಟೇ ಸಾಧ್ಯವಾಯಿತು. ಬುಮ್ರಾ 4 ವಿಕೆಟ್ ಪಡೆದರೆ, ಅಶ್ವಿನ್ 3 ಹಾಗೂ ಸಿರಾಜ್ 2 ವಿಕೆಟ್ ಗಳಿಸಿದರು.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಬೌಲಿಂಗ್ ನಲ್ಲಿ ಮಿಂಚಿದ ಬೌಲರ್ ಸಿರಾಜ್ 37 ರನ್ ಗೆ 3 ವಿಕೆಟ್ ಪಡೆದರೆ, ಜಸ್ಪೀತ್ ಬುಮ್ರಾ 54ಕ್ಕೆ 2, ರವಿಚಂದ್ರನ್ ಅಶ್ವಿನ್ 71ಕ್ಕೆ 2, ರವೀಂದ್ರ ಜಡೇಜಾ 28 ಕ್ಕೆ 2 ವಿಕೆಟ್ ಪಡೆದರು. ವೇಗಿ ಉಮೇಶ್ ಯಾದವ್ ಪಂದ್ಯದ ವೇಳೆ ಗಾಯಗೊಂಡಿದ್ದರಿಂದ ಕೇವಲ 3. 3 ಓವರ್ ಎಸೆದು 5 ರನ್ ನೀಡಿ 1 ವಿಕೆಟ್ ಗಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ 70 ರನ್ ಮಾಡುವ ಮೂಲಕ ಭಾರತದ ಮೊದಲ ಟೆಸ್ಟ್ ನಲ್ಲಿ ಅನುಭವಿಸಿದ್ದ ಹೀನಾಯ ಸೋಲನ್ನು ಜಯ ಗಳಿಸುವ ಮೂಲಕ ಸರಿದೂಗಿಸಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಮಾಯಂಕ್ ಅಗರವಾಲ್ ಹಾಗೂ ಚೇತೇಶ್ವರ ಪೂಜಾರರವರು ಔಟ್ ಆದ್ದರಿಂದ ಎರಡು ವಿಕೆಟ್ ಕಳೆದುಕೊಂಡಿತ್ತು.

ನಾಯಕ ವಿರಾಟ್ ಕೊಹ್ಲಿ ಯವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ನಾಯಕನ ಆಟವಾಡಿದರು.
ಅಜಿಂಕ್ಯ ರಹಾನೆ ಔಟಾಗದೆ 27 ಹಾಗೂ ಶುಭಮನ್ ಗಿಲ್ 35 ರನ್ ಮಾಡಿದರು.

ಎರಡನೇ ಟೆಸ್ಟ್ ಪಂದ್ಯ
ಸ್ಕೋರ್ ಬೋರ್ಡ್
ಸ್ಥಳ: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್

ಆಸ್ಟ್ರೇಲಿಯಾ ಬ್ಯಾಟಿಂಗ್:
ಮೊದಲ ಇನ್ನಿಂಗ್ಸ್ 195 ಕ್ಕೆ ಆಲೌಟ್
ಲಾಬುಸ್ರಗನ್ 48

ಭಾರತ ಬೌಲಿಂಗ್
ಬುಮ್ರಾ 56 ಕ್ಕೆ 4 ವಿಕೆಟ್
ಅಶ್ವಿನ್ 35 ಕ್ಕೆ 3 ವಿಕೆಟ್
ಸಿರಾಜ್ 40 ಕ್ಕೆ 2 ವಿಕೆಟ್

ಭಾರತ ಮೊದಲ ಇನ್ನಿಂಗ್ಸ್
326ಕ್ಕೆ ಆಲೌಟ್
ಅಜಿಂಕ್ಯ ರಹಾನೆ 112
ರವೀಂದ್ರ ಜಡೇಜಾ 57

ಆಸ್ಟ್ರೇಲಿಯಾ ಬೌಲಿಂಗ್
ಸ್ಟಾರ್ಕ್ 78ಕ್ಕೆ 3
ಲಿಯಾನ್ 72 ಕ್ಕೆ 3

ಆಸ್ಟ್ರೇಲಿಯಾ ಬ್ಯಾಟಿಂಗ್: ಎರಡನೇ ಇನ್ನಿಂಗ್ಸ್
200 ಕ್ಕೆ ಆಲೌಟ್
ಕ್ಯಾಮರೂನ್ ಗ್ರೀನ್ 45

ಭಾರತ ಬೌಲಿಂಗ್
ಸಿರಾಜ್ 37 ಕ್ಕೆ 3 ವಿಕೆಟ್
ಬುಮ್ರಾ 54 ಕ್ಕೆ 2
ಅಶ್ವಿನ್ 71 ಕ್ಕೆ 2
ಜಡೇಜಾ 28 ಕ್ಕೆ 2

ಭಾರತ ಎರಡನೇ ಇನ್ನಿಂಗ್ಸ್
70 ಕ್ಕೆ 2 ವಿಕೆಟ್

ಶುಭಮನ್ ಗಿಲ್ 35
ಅಜಿಂಕ್ಯ ರಹಾನೆ 27

ಆಸ್ಟ್ರೇಲಿಯಾ ಬೌಲಿಂಗ್.
ಸ್ಟಾರ್ಕ್ 20 ಕ್ಕೆ 1
ಕಮಿನ್ಸ್ 22 ಕ್ಕೆ 1