ಕೊರೊನಕ್ಕೆ ಹೆದರಿ ಮೂರು ತಿಂಗಳು ವಿಮಾನ ನಿಲ್ದಾಣದಲ್ಲಿ ಅಡಗಿ ಕೂತಿದ್ದ ಭಾರತೀಯನ ಬಂಧ‌ನ

0
661

ಸನ್ಮಾರ್ಗ ವಾರ್ತೆ

ಲಾಸ್ ಏಂಜಲೀಸ್: ಕೊರೋನಾಕ್ಕೆ ಹೆದರಿ ಚಿಕಾಗೋ ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳು ಅಡಗಿ ಕೂತಿದ್ದ 36 ವರ್ಷದ ಭಾರತೀಯ ಮೂಲದ ಆದಿತ್ಯ ಸಿಂಗ್ ಎಂಬ ವ್ಯಕ್ತಿಯನ್ನು ಚಿಕಾಗೊದ ಏರ್ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ವಿಮಾನ ನಿಲ್ದಾಣದ ಸುರಕ್ಷಿತ ಪ್ರದೇಶದಲ್ಲಿ ವಾಸಿಸಿದ್ದ ಈತನನ್ನು ಬಂಧಿಸಲಾಗಿದೆ ಎಂದು ಚಿಕಾಗೊದ ಟ್ರಿಬ್ಯೂನಲ್ ಪತ್ರಿಕೆ ವರದಿ ಮಾಡಿದೆ.

ಆದಿತ್ಯ ಸಿಂಗ್ ಕ್ಯಾಲಿಫೋರ್ನಿಯದ ಲಾಸ್ ಏಂಜಲೀಸ್ ನ ನಿವಾಸಿಯಾಗಿದ್ದಾನೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ನಿಯಂತ್ರಣವಿದ್ದ ಸ್ಥಳದಲ್ಲಿ ಈತ ವಾಸವಾಗಿದ್ದ ಎಂದು ತಿಳಿದು ಬಂದಿದೆ.

ಕಳ್ಳತನ ಮಾಡಿದ್ದಾನೆ ಎಂದು ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಅಕ್ಟೋಬರ್ 19ಕ್ಕೆ ಲಾಸ್ ಏಂಜಲೀಸ್‍ನಿಂದ ಒಹೇರ್ ವಿಮಾನನಿಲ್ದಾಣಕ್ಕೆ ಬಂದು ಸುರಕ್ಷಿತ ಪ್ರದೇಶದಲ್ಲಿ ಇರತೊಡಗಿದ್ದ ಎಂದು ಪ್ರಾಸಿಕ್ಯೂಟರ್ ಗಳು ಕೋರ್ಟಿಗೆ ತಿಳಿಸಿದ್ದಾರೆ.

ಈತನ ವರ್ತನೆಯಲ್ಲಿ ಸಂದೇಹವಾಗಿ ಯುನೈಟೆಡ್ ಏರ್‌‍ಲೈನ್ಸ್ ಅಧಿಕಾರಿಗಳು ದಾಖಲೆ ಹಾಜರುಪಡಿಸಲು ಹೇಳಿದ್ದರಿಂದ ಈತನ ಮೋಸ ಬಹಿರಂಗವಾಗಿದೆ. ಆದಿತ್ಯ ಸಿಂಗ್‌ ನ ಕೈಯಲ್ಲಿದ್ದ ದಾಖಲೆ ವಿಮಾನ ನಿಲ್ದಾಣದ ಆಪರೇಷನ್ ಮ್ಯಾನೇಜರ್ ನದ್ದಾಗಿದ್ದು ಅದನ್ನು ಕದ್ದಿದ್ದು ಪತ್ತೆಯಾಗಿದೆ.

ಕೊರೊನ ಕಾರಣದಿಂದ ಈತನಿಗೆ ಮನೆಗೆ ಹೋಗಲು ಹೆದರಿಕೆಯಾಗಿತ್ತೆಂದು ಅಸಿಸ್ಟೆಂಟ್ ಸ್ಟೇಟ್ ಅಟಾರ್ನಿ ಕ್ಯಾಥಲಿನ್ ಹಾಗೆರ್ಟಿ ತಿಳಿಸಿದ್ದಾರೆ.