ಗಡಿ ದಾಟಿ ಭಾರತಕ್ಕೆ ಬಂದ ಚೀನದ ಸೈನಿಕನನ್ನು ಹಸ್ತಾಂತರಿಸಿದ ಭದ್ರತಾ ಪಡೆ

0
144

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.21:ದಾರಿ ತಪ್ಪಿ ಲಡಾಕಿನ ಭಾರತೀ ಗಡಿಗೆ ಬಂದ ಚೀನದ ಸೈನಿಕನನ್ನು ಭಾರತದ ಗಡಿ ಭದ್ರತಾ ಸೇನೆ ಮರಳಿ ಕಳುಹಿಸಿದೆ. ಬುಧವಾರ ಬೆಳಗ್ಗೆ ಚುಷುಲ್ ಮೊಲ್ಡೊ ಮೀಟಿಂಗ್ ಪೊಯಿಂಟಿನಲ್ಲಿ ಚೀನದ ಪೀಪಲ್ಸ್ ಆರ್ಮಿಯ ಕೊರ್ಪರಲ್ವಾಂಗ್ ಯೊ ಲಾಂಗ್ ಎಂಬ ಸೈನಿಕನನ್ನು ಭಾರತ ಹಸ್ತಾಂತರಿಸಿದೆ. ಚೀನದ ಸೈನಿಕ ಪೂರ್ವ ಲಡಾಕಿನ ಡೆಂಚೊಕ್ ಪ್ರದೇಶದ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದ್ದ ಈತನಿಗೆ ಆಕ್ಸಿಜನ್, ಆಹಾರ, ಚಳಿಯನ್ನು ಎದುರಿಸುವ ಬಟ್ಟೆ ಸಹಿತ ಅಗತ್ಯ ವಸ್ತುಗಳನ್ನು ನೀಡಿ ಹಸ್ತಾಂತರಿಸಲಾಗಿದೆ ಭಾರತದ ಸೇನೆ ತಿಳಿಸಿದೆ.

ಅಕ್ಟೋಬರ್ ಹದಿನೆಂಟರಂದು ಸಂಜೆ ಪ್ರದೇಶ ವಾಸಿಗಳ ಮನವಿ ಪ್ರಕಾರ ಜಾನುವಾರಗಳನ್ನು ಅಟ್ಟಿಕೊಂಡು ಹೋಗಲು ಸ್ಥಳೀಯ ನಿವಾಸಿಗಳಿಗೆ ನೆರವಾಗುವ ವೇಳೆ ಸೈನಿಕ ಕಾಣೆಯಾಗಿದ್ದ ಎಂದು ಚೀನದ ಸೇನೆ ಹೇಳುತ್ತಿದೆ. ಸೈನಿಕ ಕಾಣೆಯಾಗಿದ್ದನ್ನು ಗಡಿಯ ಚೀನದ ಸೈನಿಕರು ಭಾರತೀಯ ಸೇನೆಗೆ ತಿಳಿಸಿತ್ತು. ಸೈನಿಕನನ್ನು ಭಾರತ ಕೂಡಲೇ ಹಸ್ತಾಂತರಿಸಲಿದೆ ಎಂದು ನಿರೀಕ್ಷಿಸುವುದಾಗಿ ವೆಸ್ಟರ್ನ್ ತಿಯಟ್ಟರ್ ಕಮಾಂಡ್ ವಕ್ತಾರ ಸೀನಿಯರ ಕರ್ನಲ್ ಶಾಂಗ್ ಶುಯ್ಲಿ ಕಳೆದ ದಿವಸ ಹೇಳಿದ್ದರು.

ಜೂನ್ 15ರ ಘರ್ಷಣೆಯ ಹಿನ್ನೆಲೆಯಲ್ಲಿ ಭಾರತ ಚೀನದ ಗಡಿಯಲ್ಲಿ ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರ ನಂತರ ಘರ್ಷಣೆ ಕಡಿಮೆ ಮಾಡುವ ಉದ್ದೇಶದಿಂದ ಕಮಾಂಡರ್ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದರು.