ಟ್ರಂಪ್ ಬೆಂಬಲಿಗರ ದಾಂಧಲೆ ವೇಳೆ ಭಾರತದ ಧ್ವಜ ಪ್ರತ್ಯಕ್ಷ : ಟ್ವಿಟರ್ ನಲ್ಲಿ ತೀವ್ರ ಚರ್ಚೆ

0
346

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಪಾರ್ಲಿಮೆಂಟ್ ಕಟ್ಟಡಕ್ಕೆ ದಾಳಿ ಮಾಡಿದ್ದ ಟ್ರಂಪ್ ಬೆಂಬಲಿಗರ ಕೈಯಲ್ಲಿ ಭಾರತದ ಧ್ವಜ ಇರುವ ವೀಡಿಯೊವೊಂದು ವೈರಲ್ ಆಗಿದ್ದು, ಸದ್ಯ ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಲ್ಲದೇ, ಟ್ವಿಟರ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಿನ್ನೆ ಅಮೇರಿಕಾ ಕಾಂಗ್ರೆಸ್ ಡೆಮಾಕ್ರಟಿಕ್ ಪಾರ್ಟಿಯ ಜೊ ಬೈಡನ್ ರ ಗೆಲುವನ್ನು ಅಧಿಕೃತವಾಗಿ ಘೋಷಿಸಲು ಎರಡು ಸಭೆ ಕರೆದಿದ್ದ ವೇಳೆ ಈ ದಾಂಧಲೆ ನಡೆಸಿದ್ದ ಟ್ರಂಪ್ ಬೆಂಬಲಿಗರ ಈ ಕೃತ್ಯ ವಿಶ್ವದಾದ್ಯಂತ ಚರ್ಚೆಯಾಗಿತ್ತು‌. ಗುಂಪಿನ ಮಧ್ಯೆ ಭಾರತದ ಧ್ವಜವೊಂದು ಹಾರಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.

ಟ್ರಂಪ್ ದ ಅನುಯಾಯಿಗಳು ರಿಪಬ್ಲಿಕನ್ ಪಾರ್ಟಿ ಧ್ವಜವನ್ನು ಹಾಗೂ ಟ್ರಂಪ್‍ರನ್ನು ಬೆಂಬಲಿಸುವ ಬ್ಯಾನರ್‍ ಗಳನ್ನು ಕೈಯಲ್ಲಿ ಹಿಡಿದಿದ್ದರು. ಅಮೆರಿಕದ ಪತಾಕೆಯೂ ಕೆಲವರ ಕೈಲ್ಲಿತ್ತು. ಇದರ ನಡುವೆ ಭಾರತದ ಪತಾಕೆಯ ವೀಡಿಯೊ ದೃಶ್ಯಗಳು ಪ್ರತ್ಯಕ್ಷವಾಗಿದೆ.

ಯಾರು ಭಾರತದ ಪತಾಕೆ ಹಿಡಿದಿರುವುದು ಮತ್ತು ಈ ಪತಾಕೆಯನ್ನು ಕೊಂಡು ಹೋಗಲು ಕಾರಣವೇನೆಂದು ಸ್ಪಷ್ಟವಾಗಿಲ್ಲ. ಇದೇ ವೇಳೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಯೂ ನಡೆಯುತ್ತಿದೆ.

ಬಿಜೆಪಿ ನಾಯಕ ವರುಣ್ ಗಾಂಧಿ ವೀಡಿಯೊ ಟ್ವೀಟ್ ಮಾಡಿದ್ದಾರೆ. ಯಾಕೆ ಅಲ್ಲಿ ಒಂದು ಭಾರತದ ಪತಾಕೆ. ನಮಗೆ ಅಲ್ಲಿ ಭಾಗವಹಿಸುವ ಅಗತ್ಯವಿಲ್ಲದ ಒಂದು ಹೋರಾಟ ಅದು ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.