ಕತರ್ ವಿರುದ್ಧ ಯುಎಇ ಆರೋಪವನ್ನು ತಿರಸ್ಕರಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ

0
406

ವಾಷಿಂಗ್ಟನ್, ಜೂ. 18: ಕತರ್ ವಿರುದ್ಧ ಯುಎಇ ಎತ್ತಿದ ಎಲ್ಲ ವಿಷಯಗಳನ್ನು ಅಂತಾರಾಷ್ಟ್ರೀಯ ಕೋರ್ಟು ನಿರಾಕರಿಸಿದೆ. ಗಲ್ಫ್ ದೇಶಗಳ ನಡುವೆ ಕತರ್ ತಾರತಮ್ಯದಿಂದ ವರ್ತಿಸುತ್ತಿದೆ, ಆದ್ದರಿಂದ ಅದರ ವಿರುದ್ಧ ತಕ್ಷಣ ಕ್ರಮ ಜರಗಿಸಬೇಕೆಂದು ಯುಎಇ ಅರ್ಜಿಯಲ್ಲಿ ತಿಳಿಸಿತ್ತು. ಕತರ್ ವಿರುದ್ಧ ಕ್ರಮಕ್ಕೆ ಬಲವಾದ ಆಗ್ರಹವನ್ನು ಯುಎಇ ವ್ಯಕ್ತಪಡಿಸುತ್ತಿರುವ ವೇಳೆಯೇ ಶುಕ್ರವಾರ ಹೇಗ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ನ್ಯಾಯಾಲಯವು ಪ್ರಕರಣವನ್ನು ತಳ್ಳಿಹಾಕಿ ಆದೇಶ ಹೊರಡಿಸಿದೆ.

ಗಲ್ಫ್ ವಲಯದ ಸುರಕ್ಷೆಗೆ ಬೆದರಿಕೆಯಾಗಿದೆ ಎಂದು ಆರೋಪಿಸಿ ತನ್ನ ವೆಬ್‍ಸೈಟ್‍ಗಳಲ್ಲಿ ಪ್ರವೇಶಿಸದಂತೆ ಕತರನ್ನು ಯುಎಇ ತಡೆದಿತ್ತು. ಗಲ್ಫ್ ಸುರಕ್ಷೆಗೆ ಬೆದರಿಕೆ ಎಂದು ಇದಕ್ಕೆ ನೆಪವನ್ನು ತೋರಿಸಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ತನ್ನ ವಿರುದ್ಧ ನಿಷೇಧವನ್ನು ವಿರೋಧಿಸಿ ಕತರ್ ರಂಗಪ್ರವೇಶಿಸಿತ್ತು. ಹದಿನೈದು ಮಂದಿ ನ್ಯಾಯಾಧೀಶರು ಯುಎಇಯ ವಾದವನ್ನು ವಿರೋಧಿಸಿದ್ದು ಒಬ್ಬರು ಮಾತ್ರ ಯುಎಇಯ ವಾದವನ್ನು ಬೆಂಬಲಿಸಿದ್ದಾರೆ ಎಂದು ಕತರ್ ಚೀಫ್ ಜಡ್ಜ್ ಅಬ್ದುಲ್‍ ಕವಿ ಯೂಸುಫ್‍ರನ್ನು ಉದ್ಧರಿಸಿ ಅಲ್‍ಜಝೀರ ವರದಿ ಮಾಡಿದೆ.