ಇರಾನ್‍ನಲ್ಲಿ ನ್ಯೂಯಾರ್ಕ್ ಟೈಮ್ಸ್ ನ ಅಂಗೀಕಾರ ರದ್ದು

0
333

ಟೆಹ್ರಾನ್, ಜೂ. 12:ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲೊಂದಾದ ನ್ಯೂಯಾರ್ಕ್ ಟೈಮ್ಸ್ ನ ಅಂಗೀಕಾರವನ್ನು ಇರಾನ್ ರದ್ದು ಪಡಿಸಿದೆ. ಯಾವುದೇ ವಿವರಣೆ ನೀಡದೆ ನ್ಯೂಯಾರ್ಕ್ ಟೈಮ್ಸ್ ನ ಇರಾನ್ ರಾಜಧಾನಿ ಟೆಹ್ರಾನ್‍ನಲ್ಲಿರುವ ಬ್ಯೂರೊದ ಅಂಗೀಕಾರ ರದ್ದುಪಡಿಸಲಾಗಿದೆ. ಈ ವಿಷಯವನ್ನು 43 ವರ್ಷದ ನ್ಯೂಯಾರ್ಕ್ ಟೈಮ್ಸ್ ಚೀಫ್ ಡಚ್ ಪ್ರಜೆ ಥಾಮಸ್ ಎರ್ಡ್‍ಬ್ರಿಂಗ್ ವರದಿ ಮಾಡಿದ್ದಾರೆ. 2012ರಿಂದ ನ್ಯೂಯಾರ್ಕ್ ಟೈಮ್ಸ್ ಬ್ಯೂರೊ ಇರಾನ್‍ನಲ್ಲಿ ಕಾರ್ಯಾಚರಿಸುತ್ತಿತ್ತು.

ಕಳೆದ ಫೆಬ್ರುವರಿಯಿಂದ ಇರಾನ್‍ನಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಪತ್ರಿಕೆಯ ಅಂಗೀಕಾರವನ್ನು ಇರಾನ್ ತಡೆದಿತ್ತು. ಸೋಮವಾರ ಹೊರಬಂದ ಪತ್ರಿಕೆಯಲ್ಲಿ ಈ ವಿವರವನ್ನು ಮುದ್ರಿಸಲಾಗಿದೆ. ಇದಕ್ಕೆ ಕುರಿತ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಗೊಳ್ಳುವ ನಡುವೆಯೇ ಪತ್ರಿಕೆ ಅಂಗೀಕಾರ ರದ್ದುಗೊಂಡಿರುವ ವಿವರವನ್ನು ಬಹಿರಂಗಪಡಿಸಿದೆ. ಇರಾನ್ , ಅಮೆರಿಕಗಳ ನಡುವೆ ಘರ್ಷಣಾ ಸ್ಥಿತಿ ನೆಲೆಸಿದ್ದರಿಂದ ಅಮೆರಿಕನ್ ಪತ್ರಕರ್ತರ ವಿರುದ್ಧ ಇರಾನ್ ಕಠಿಣ ಧೊರಣೆ ಸ್ವೀಕರಿಸಿದೆ.