ಇಸ್ರೇಲಿನ ಯುದ್ಧ ಬೆದರಿಕೆಗೆ ವಿಶ್ವಸಂಸ್ಥೆ ಪ್ರತಿಕ್ರಿಯಿಸಬೇಕು: ಇರಾನ್

0
406

ಸನ್ಮಾರ್ಗ ವಾರ್ತೆ

ಟೆಹ್ರಾನ್: ಇರಾನ್ ವಿರುದ್ಧ ಇತ್ತೀಚೆಗೆ ಯುದ್ಧ ಬೆದರಿಕೆಯನ್ನು ಹಾಕುವುದನ್ನು ಇಸ್ರೇಲ್ ಮುಂದುವರಿಸಿದೆ. ಇದನ್ನು ಬೊಟ್ಟು ಮಾಡಿ ವಿಶ್ವಸಂಸ್ಥೆಯಲ್ಲಿ ಇರಾನ್‍ನ ಪ್ರತಿನಿಧಿ ಮಾಜಿದ್ ತಖ್ತ್ ರಾವಿಂಚಿ ಮನವಿ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಮಧ್ಯಪ್ರವೇಶಿಸಬೇಕೆಂದು ರಾವಿಂಚಿ ಆಗ್ರಹಿಸಿದರು.

ಇರಾನ್ ವಿರುದ್ಧ ಪ್ರಚೋದಕ ಯುದ್ಧ ಕರೆಯನ್ನು ಆಗಾಗ ಇಸ್ರೇಲ್ ನೀಡುತ್ತಿದೆ. ಸಕ್ರಿಯ ಸೈನಿಕ ಕ್ರಮಕ್ಕೆ ಇಸ್ರೇಲ್ ಯೋಜನೆ ಹಾಕಿದೆ ಎಂದು ಮಾಜಿದ್ ತಾರಿಕ್ ರಾವಿಂಚಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟಾನಿಯೊ ಗುಟರೆಸ್‍ರಿಗೆ ಕಳುಹಿಸಿದ ಪತ್ರದಲ್ಲಿ ಹೇಳಿದ್ದಾರೆ.

ಕೆಲವು ತಿಂಗಳಿನಿಂದ ಇರಾನ್ ಅಣು ಕಾರ್ಯಕ್ರಮ ಮುಂದುವರಿಯುವುದಕ್ಕೆ ಬದಲಾಗಿ ಪ್ರತೀಕಾರವಾಗಿ ಸೇನಾ ಸಿದ್ಧತೆ ಮಾತ್ರವಲ್ಲ ಹಲವು ಸೈನಿಕಾ ಕಾರ್ಯಾಚರಣೆಗೆ ಇಸ್ರೇಲ್ ಸಿದ್ಧತೆ ಮಾಡಿದೆ ಎಂದು ಇಸ್ರೇಲಿನ ಜನರಲ್ ಹೇಳಿಕೆ ನೀಡಿರುವುದು ಇತ್ತೀಚೆಗಿನ ಉದಾಹರಣೆ ಎಂದು ರಾವಿಂಚಿ ಹೇಳಿದರು.