ಇಸ್ರೇಲಿಯನ್ನರೊಂದಿಗೆ ಸಂಬಂಧ: ಅಧ್ಯಾಪಕಿಯನ್ನು ಬಂಧಿಸಿದ ಇರಾನ್

0
507

ಸನ್ಮಾರ್ಗ ವಾರ್ತೆ

ಟೆಹ್ರಾನ್,ನ.30: ಇಸ್ರೇಲಿಯನ್ನರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಕಂಡು ಬಂದ ನಂತರ ಬ್ರಿಟಿಷ್ ಆಸ್ಟ್ರೇಲಿಯನ್ ವಿಶ್ವವಿದ್ಯಾನಿಲಯದ ಅಧ್ಯಾಪಕಿ ಕೆಯ್ಲಿ ಮುರ್-ಗಿಲ್ಬರ್ಟ್‍‌ರನ್ನು ಇರಾನ್ ಅಧಿಕಾರಿಗಳು ಪುನಃ ಬಂಧಿಸಿದ್ದಾರೆಂದು ವರದಿಯಾಗಿದೆ. ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ನಿರಾಧಾರ ಸಂದೇಹದಲ್ಲಿ ಮುರ್ ಗಿಲ್ಬರ್ಟ್‍‌ರನ್ನು ಬಂಧಿಸಲಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಶುಕ್ರವಾರ ವಿವಿಧ ರಾಜತಾಂತ್ರಿಕರು ಮತ್ತು ಸರಕಾರಿ ಮೂಲಗಳನ್ನು ಉದ್ಧರಿಸಿ ವರದಿ ಮಾಡಿದೆ.

ಮುರ್-ಗಿಲ್ಬರ್ಟ್‌ರ ಸಂಗಾತಿ ಇಸ್ರೇಲಿಯನ್ ವ್ಯಕ್ತಿ ಎಂದು ಇರಾನ್ ಪತ್ತೆ ಹಚ್ಚಿತ್ತು. 2018ರಲ್ಲಿ ಅವರನ್ನು ಟೆಹ್ರಾನ್ ವಿಮಾನ ನಿಲ್ದಾನದಲ್ಲಿ ಅಧಿಕೃತವಾಗಿ ಬಂಧಿಸಿತ್ತು. ಕೇಂಬ್ರಿಡ್ಜ್‌ನಲ್ಲಿ ಕಲಿತ ಮಿಡ್ಲೀಸ್ಟ್ ರಾಜಕೀಯದಲ್ಲಿ ಪರಿಣತಿ ಹೊಂದಿರುವ ಅವರಿಗೆ ಹತ್ತು ವರ್ಷ ಜೈಲು ಶಿಕ್ಷೆಯನ್ನೂ ನೀಡಲಾಗಿತ್ತು. ಆರೋಪವನ್ನು ಮುರ್ ಗಿಲ್ಬರ್ಟ್ ನಿರಾಕರಿಸಿದ್ದರು. ಎರಡು ವರ್ಷದ ಜೈಲಿನ ಬಳಿಕ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿತ್ತು. ಈಗ ಅವರನ್ನು ಪುನಃ ಬಂಧಿಸಲಾಗಿದೆ ಎಂದು ವರದಿಯಾಗಿದೆ.