ಇರಾನ್‍ನಿಂದ ಟ್ರಂಪ್ ವಿರುದ್ಧ ಅರೆಸ್ಟ್ ವಾರಂಟ್!

0
447

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.30: ಇರಾನ್ ಟ್ರಂಪ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಇದಕ್ಕೆ ಸಂಬಂಧ ಪಟ್ಟು ಸಹಕಾರ ನೀಡಲು ಇಂಟರ್ಪೋಲ್ ನಿರಾಕರಿಸಿದೆ. ಇರಾನ್ ಸೈನಿಕ ಜನರಲ್ ಖಾಸಿಂ ಸುಲೈಮಾನಿಯ ಹತ್ಯೆಗೆ ಸಂಬಂಧಪಟ್ಟು ಡೊನಾಲ್ಡ್ ಟ್ರಂಪ್ ಅವರ ಅನುಯಾಯಿಗಳಾದ ಕೆಲವರ ವಿರುದ್ದ ಇರಾನ್ ಬಂಧನ ಆದೇಶ ಹೊರಡಿಸಿದೆ. ಜನೆವರಿ ಮೂರರಂದು ನಡೆದ ದಾಳಿಗೆ ಸಂಬಂಧಿಸಿ ಟ್ರಂಪ್ ಅಲದೇ ಇತರ 30 ಮಂದಿಯ ವಿರುದ್ಧ ಇರಾನ್ ಬಂಧನ ವಾರಂಟ್ ಹೊರಡಿಸಿದೆ ಎಂದು ಇರಾನಿನ ಪ್ರಾಸಿಕ್ಯೂಟರ್ ಅಲಿ ಅಲ್ ಖಾಸಿಂ ಮೆಹರ್ ಹೇಳಿದರು.

ಖಾಸಿಂ ಸುಲೈಮಾನಿಯನ್ನು ಕೊಂದುದಕ್ಕಾಗಿ ಕೊಲೆ, ಭಯೋತ್ಪಾದನೆ ಮುಂತಾದ ಆರೋಪಗಳನ್ನು ಟ್ರಂಪ್ ವಿರುದ್ಧ ಹೊರಿಸಲಾಗಿದೆ ಎಂದು ಇರಾನ್ ಸುದ್ದಿಸಂಸ್ಥೆ ವರದಿ ಮಾಡಿತು. ಟ್ರಂಪ್‍ರ ಜೊತೆಗಿರುವವರ ವಿವರವನ್ನು ಇರಾನ್ ಬಹಿರಂಗಪಡಿಸಿಲ್ಲ. ಟ್ರಂಪ್‍ರ ಅಧ್ಯಕ್ಷ ಕಾಲವಧಿ ಮುಗಿದ ಬಳಿಕ ಪ್ರಾಸಿಕ್ಯೂಶನ್ ಕ್ರಮದೊಂದಿಗೆ ಮುಂದುವರಿಯಲಾಗುವುದು ಎಂದು ಅಲಿ ಅಲ್ ಖಾಸಿಂ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.