ಇರಾನ್, ಅಮೆರಿಕ ಪರಸ್ಪರ ಚರ್ಚೆ ನಡೆಸಲಿ, ಸಮಸ್ಯೆ ಸೃಷ್ಟಿಸಿದವರಿಗೆ ಬದಲಾವಣೆ ಬೇಕಿಲ್ಲ- ಕತರ್

0
491

ದೋಹ, ಜೂ. 12: ಇರಾನ್‍ನೊಂದಿಗಿನ ಬಿಕ್ಕಟ್ಟು ಶಮನ ಮತ್ತು ಈಗಿನ ಒತ್ತಡ ಪರಿಸ್ಥಿತಿ ಕಡಿಮೆಗೊಳಿಸಬೇಕೆಂದು ಕತರ್ ಮತ್ತು ಇತರ ದೇಶಗಳು ಇರಾನ್ ಮತ್ತು ಅಮೆರಿಕವನ್ನು ಆಗ್ರಹಿಸಿವೆ. ಕತರ್ ಉಪಪ್ರಧಾನಿ ಹಾಗೂ ವಿದೇಶ ಸಚಿವ ಶೇಖ್ ಮುಹಮ್ಮದ ಬಿನ್ ಅಬ್ದುರ್ರಹ್ಮಾನ್ ಅಲ್‍ಥಾನಿ ಲಂಡನ್‍ನಲ್ಲಿ ಪತ್ರಕರ್ತರಿಗೆ ಈ ವಿಷಯವನ್ನು ತಿಳಿಸಿದರು.

ಎರಡೂ ಕಡೆಯವರು ಪರಸ್ಪರ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಲು ಚರ್ಚೆ ನಡೆಸಬೇಕಾಗಿದೆ. ಈಗಿನ ಪರಿಸ್ಥಿತಿ ಇದೇ ರೀತಿ ಹೆಚ್ಚು ಸಮಯ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಆದ್ದರಿಂದ ಪರಸ್ಪರ ಜೊತೆಯಾಗಿ ಕುಳಿತು ವಿಷಯವನ್ನು ಚರ್ಚಿಸಿದರೆ ಸರಳವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕತರ್ ,ಒಮನ್, ಇರಾಕ್, ಜಪಾನಿನಂತರಹ ಹಲವು ದೇಶಗಳು ಇದೇ ಅಭಿಪ್ರಾಯವನ್ನು ಹೊಂದಿವೆ. ಈ ದೇಶಗಳು ಇರಾನ್ ಮತ್ತು ಅಮೆರಿಕವನ್ನು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸುತ್ತಿವೆ. ವಲಯದ ಕತರ್ ಸಹಿತ ಕೆಲವು ದೇಶಗಳು ಸಂಘರ್ಷದ ಸಾಧ್ಯತೆಯನ್ನು ಸರಳೀಕರಿಸಬೇಕೆಂದು ಪ್ರಮಾಣಿಕ ಬಯಸುತ್ತಿವೆ ಎಂದು ಕತರ್ ಸಚಿವರು ಹೇಳಿದರು. ಈಗಿನ ಘರ್ಷಣಾ ಸ್ಥಿತಿ ಯಾರಿಗೂ ಪ್ರಯೋಜನವಾಗುವಂತಹದ್ದಲ್ಲ. ಪರಸ್ಪರ ಸಹಕರಿಸುವುದರಿಂದ ಹೆಚ್ಚು ಪ್ರಯೋಜನಗಲಿವೆ. ಗಲ್ಫ್ ಬಿಕ್ಕಟ್ಟಿನ ಕುರಿತು ಕತರ್‍ನ ನಿಲುವನ್ನು ಉಪಪ್ರಧಾನಿ ವ್ಯಕ್ತಪಡಿಸಿದರು. ಸಮಸ್ಯೆ ಸೃಷ್ಟಿಸಿದವರು ಇದರಲ್ಲಿ ಯಾವ ಬದಲಾವಣೆಯನ್ನೂ ಬಯಸುವುದಿಲ್ಲ. ಇದು ಬಿಕ್ಕಟ್ಟು ಮುಂದುವರಿಯಲು ಕಾರಣವಾಗಿದೆ ಎಂದು ಅವರು ಹೇಳಿದರು. ಫೆಲಸ್ತೀನ್ ವಿಷಯದಲ್ಲಿ ಫೆಲಸ್ತೀನಿಗೆ ಸಹಮತವಿರುವ ಯಾವ ಶಾಂತಿ ಪ್ರಯತ್ನವನ್ನೂ ಕತರ್ ಬೆಂಬಲಿಸಲಿದೆ. ಇಸ್ರೇಲ್ ವಿಷಯದಲ್ಲಿ ಅಮೆರಿಕ ಮತ್ತು ಫೆಲಸ್ತೀನ್‍ನಡುವೆ ಸಮಸ್ಯೆ ಸೃಷ್ಟಿಯಾಗಿದೆ. ಆದರೂ ಫೆಲಸ್ತೀನಿಯರಿಗೆ ಸಹಮತ ಇರುವ ಯಾವುದೇ ಶಾಂತಿ ಮಾತುಕತೆಯನ್ನು ಕತರ್ ಬೆಂಬಲಿಸುವುದು ಎಂದು ಉಪಪ್ರಧಾನಿ ಹೇಳಿದರು.