ಇರಾನ್‍ನ ಗ್ರೇಸ್-ವನ್ ಹಡಗು ವಶಪಡಿಸಿಕೊಳ್ಳಲು ಅಮೆರಿಕದ ವಾರಂಟ್

0
324

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಆ.19: ಜಿಬ್ರಾಲ್ಟರ್ ಕೋರ್ಟು ಬಿಡುಗಡೆಗೊಳಿಸಲು ಆದೇಶ ಹೊರಡಿಸಿದ ಇರಾನಿಯನ್ ಹಡಗು ಗ್ರೇಸ್-ವನ್ ವಶಪಡಿಸಲು ಅಮೆರಿಕ ಕಾನೂನು ಇಲಾಖೆ ವಾರಂಟ್ ಕಳುಹಿಸಿದೆ. ಜುಲೈ ನಾಲ್ಕಕ್ಕೆ ಬ್ರಿಟನ್ ಇರಾನಿನ ಹಡಗನ್ನು ವಶಪಡಿಸಿಕೊಂಡಿತ್ತು. ವಾಷಿಂಗ್ಟನ್ ಅಮೆರಿಕ ಫೆಡರಲ್ ಕೋರ್ಟು ಶುಕ್ರವಾರ ವಾರಂಟ್ ಹೊರಡಿಸಿತ್ತು. ಟ್ಯಾಂಕರ್ ಮತ್ತು ಅದರಲ್ಲಿರುವ ತೈಲವನ್ನು ವಶಪಡಿಸಿಕೊಳ್ಳಲು ಇರಾನ್ ಸೂಚನೆ ನೀಡಿದೆ. ಪಾರಡೈಸ್ ಗ್ಲೋಬಲ್ ಟ್ರೇಡಿಂಗ್ ಎಂಬ ಇರಾನಿಯ ಕಂಪೆನಿಯ ಹೆಸರಿನಲ್ಲಿ ಅಮೆರಿಕದ ಬ್ಯಾಂಕಿನಲ್ಲಿರುವ 9,95000 ಡಾಲರನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೂಡಾ ಆದೇಶ ಹೊರಡಿಸಲಾಗಿದೆ. ಅಮೆರಿಕದ ವಾರಂಟ್ ಕುರಿತು ಬ್ರಿಟನ್ ಅಥವಾ ಜಿಬ್ರಾಲ್ಟರ್ ಪ್ರತಿಕ್ರಿಯೆ ನೀಡಿಲ್ಲ.

ಹಡಗು ಸಂಸ್ಥೆಯು ಅಂತಾರಾಜ್ಯ ಆರ್ಥಿಕ ಕಾನೂನನ್ನು ಉಲ್ಲಂಘಿಸಿದೆ. ಬ್ಯಾಂಕ್ ವಂಚನೆ, ಕಪ್ಪು ಹಣ ಬಿಳಿ ಮಾಡುವುದು, ಭಯೋತ್ಪಾದಕರಿಗೆ ಸಹಾಯ ಮುಂತಾದ ಅಪರಾಧಗಳನ್ನು ಮಾಡಿದೆ ಎಂದು ಕೋರ್ಟು ಹೇಳಿದೆ. ಇಂತಹ ಸರಕು ಸಾಗಾಟದ ಮರೆಯಲ್ಲಿ ಕೋಟ್ಯಂತರ ಡಾಲರ್ ಕಪ್ಪು ಹಣವನ್ನು ಬಿಳಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಫೆಡರಲ್ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಇದರ ಕಕ್ಷಿಗಳಿಗೆ ಇರಾನಿನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡಿನೊಂದಿಗೆ ಸಂಬಂಧ ಇದೆ ಎಂದು ಇವರು ಹೇಳಿದರು. ರೆವೆಲ್ಯೂಶನರಿ ಗಾರ್ಡನು ಅಮೆರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ.