ಇಸ್ರೇಲ್: ಸರಕಾರ ರಚಿಸುವಲ್ಲಿ ಬೆನ್ನಿಗ್ರಾಂಟ್ಸ್ ವಿಫಲ

0
524

ಸನ್ಮಾರ್ಗ ವಾರ್ತೆ

ಜೆರುಸಲೇಮ್,ನ.21: ನಿರ್ದಿಷ್ಟ ಸಮಯದಲ್ಲಿ ಸಖ್ಯ ಸರಕಾರ ರಚಿಸಲು ಇಸ್ರೇಲಿನ ಪ್ರತಿಪಕ್ಷ ನಾಯಕ ಬ್ಲ್ಯೂ ಆಂಡ್ ವೈಟ್ ಪಾರ್ಟಿಯ ನಾಯಕ ಬೆನ್ನಿ ಗ್ರಾಂಟ್ಸ್ ವಿಫಲರಾಗಿದ್ದಾರೆ. ಸರಕಾರ ರಚಿಸಲು ಈಗಿನ ಉಸ್ತುವಾರಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಫರಾಗಿದ್ದರು. ನಂತರ ಬೆನ್ನಿಗ್ರಾಂಟ್ಸ್ ಅವಕಾಶ ಬಂದಿತ್ತು. ಕಳೆದ ಸೆಪ್ಟಂಬರ್‍‌ನಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. 120 ಮಂದಿಯ ಸೆನೆಟ್‍ನಲ್ಲಿ 61 ಸದಸ್ಯರು ಇದ್ದರೆ ಕೇವಲ ಬಹುಮತ ಸಿಗುತ್ತದೆ. ಬ್ಲೂ ಎಂಡ್ ವೈಟ್ ಪಾರ್ಟಿಗೆ 33 ಸೀಟುಗಳಿದ್ದು ವಿವಿಧ ಪಾರ್ಟಿಗಳನ್ನು ಒಗ್ಗೂಡಿಸಿ ಬೆನ್ನಿಗ್ರಾಂಟ್‍ರಿಂದ ಸರಕಾರ ರಚಿಸಲು ಸಾಧ್ಯವಿಲ್ಲ. ಮುಂದೆ 21 ದಿವಸಗಳೊಳಗೆ ಯಾರನ್ನಾದರೂ ಪ್ರಧಾನಿ ಮಾಡುವಲ್ಲಿ ವಿಫಲವಾದರೆ ಹೊಸದಾಗಿ ಚುನಾವಣೆ ನಡೆಯಲಿದೆ.