ಫೇಲಸ್ತೀನ್‌ನಲ್ಲಿ ಇಸ್ರೇಲ್ ಸೇನಾ ಕ್ರೌರ್ಯ: ಸಣ್ಣ ಬಾಲಕನ ಮುಂದೆ ತಂದೆಗೆ ಹೊಡೆದ ಇಸ್ರೇಲ್ ಸೈನಿಕರು-ವೀಡಿಯೊ

0
524

ಸನ್ಮಾರ್ಗ ವಾರ್ತೆ

ಜೆರುಸಲೇಮ್,ನ.8: ಇಸ್ರೇಲಿನ ಸೈನ್ಯ ಫೆಲಸ್ತೀನಿಯರ ಮೇಲೆ ಎಸಗುತ್ತಿರುವ ವಿವಿಧ ಕ್ರೌರ್ಯಗಳು ನಿರಂತರ ವರದಿಯಾಗುತ್ತಿವೆ. ಸಣ್ಣ ಬಾಲಕನ ಮುಂದೆಯೇ ಫೆಲಸ್ತೀನಿ ವ್ಯಕ್ತಿಯನ್ನು ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ.

ಟೈಮ್ಸ್ ಆಫ್ ಇಸ್ರೇಲ್ ಹೊರಗೆ ಬಿಟ್ಟ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೆಸ್ಟ್‌ಬ್ಯಾಂಕಿನ ಹೆಬ್ರಾನ್‍ನಲ್ಲಿ ಘಟನೆ ನಡೆದಿದೆ. ಇಲ್ಲಿಗೆ ಬಂದ ಇಸ್ರೇಲ್ ಸೇನೆ ತಮ್ಮ ಮೇಲೆ ನಿರಂತ ಹಲ್ಲೆ ನಡೆಸುತ್ತಿದೆ ಎಂದು ಫೆಲಸ್ತೀನ್ ನಾಗರಿಕರು ಹೇಳುತ್ತಿದ್ದಾರೆ. ವೆಸ್ಟ್‌ಬ್ಯಾಂಕಿನ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಘಟನೆ ನಡೆದಿದೆ.

ತಮ್ಮ ಸಣ್ಣ ಮಗು ನಮಗೆ ಕಲ್ಲೆಸೆದಿದೆ ಎಂದು ಆರೋಪಿಸಿ ಇಬ್ಬರು ಇಸ್ರೇಲಿ ಸೈನಿಕರು ತಂದೆಗೆ ಹಲ್ಲೆ ನಡೆಸಿದರು. ಅವನಿಗೆ ಐದು ವರ್ಷ ಅವನು ಕಲ್ಲು ಎಸೆದಿಲ್ಲ ಎಂದು ತಂದೆ ಹೇಳಿದರು.

ಸೈನಿಕರು ಮತ್ತು ತಂದೆಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಮಗುವಿಗೆ ಎಷ್ಟು ವಯಸ್ಸಾಯಿತು ಎಂಬುದು ನಮ್ಮ ವಿಷಯವಲ್ಲ ನಿಮ್ಮ ಕೈ ನಮ್ಮ ಮೇಲೆ ಎತ್ತಬಾರದು ಎಂದು ಸೈನಿಕರು ಹೇಳಿ ಹೊಡೆದಿದ್ದಾರೆ. ಇನ್ನೊಬ್ಬ ಸೈನಿಕ ತಂದೆಯ ಮುಖಕ್ಕೆ ಮತ್ತು ದೇಹಕ್ಕೆ ಕೋವಿಯಿಂದ ಹಲ್ಲೆ ನಡೆಸಿದನು.

ಕಳೆದ ಬಾರಿ ಒಬ್ಬ ಯುವಕನ ಮೇಲೆ ಕಾರಣವಿಲ್ಲದೇ ಇಸ್ರೇಲ್ ಸೈನ್ಯ ಗುಂಡು ಹಾರಿಸಿತ್ತು. ಎರಡು ಕೈ ಎತ್ತಿ ನಡೆದು ಹೋಗುತ್ತಿದ್ದಾಗ ಆತನಿಗೆ ಹಿಂಬಂದಿಯಿಂದ ಗುಂಡು ಹಾರಿಸಲಾಗಿದ್ದ ವಿಡಿಯೋ ಇಸ್ರೇಲ್ ಸೇನಾ ಕ್ರೌರ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿತ್ತು.