ಗಾಝದಲ್ಲಿ ಇಸ್ರೇಲಿನ ರಹಸ್ಯ ಬೇಹುಗಾರಿಕಾ ಚಟುವಟಿಕೆ: ಬಹಿರಂಗ ಪಡಿಸಿದ ಅಲ್‌ ಜಝೀರಾ ವರದಿ

0
643

ಸನ್ಮಾರ್ಗ‌ ವಾರ್ತೆ

ಗಾಝ,ಸಿಟಿ,ಡಿ.4: ಗಾಝ ಪಟ್ಟಿಯಲ್ಲಿ ಇಸ್ರೇಲಿನ ಗುಪ್ತಚರ ವಿಭಾಗ ರಹಸ್ಯ ಚಟುವಟಿಕೆಗಳನ್ನ ನಡೆಸುತ್ತಿರುವುದು ಹೊಸದಾಗಿ ಬಯಲಾಗಿದೆ. 2018ರ ನವೆಂಬರ್‍‌ನಲ್ಲಿ ಇಸ್ರೇಲ್ ಫೆಲಸ್ತೀನಿಗೆ ರಾಕೆಟ್ ದಾಳಿ ಮಾಡಿತ್ತು. ಇದರ ವಿವರ ಈಗ ಬಹಿರಂಗವಾಗಿದೆ. ಎಂಟು ಇಸ್ರೇಲ್ ಏಜೆಂಟರು ವೇಷ ಬದಲಿಸಿ ಫೆಲಸ್ತೀನಿಯರ ವೇಷದಲ್ಲಿ ಫೇಲಸ್ತೀನಿ ಕುಟುಂಬದ ಹೆಸರು ಸ್ವೀಕರಿಸಿ ಗಾಝದಲ್ಲಿದ್ದು ಬೇಹುಗಾರಿಕೆ ನಡೆಸಿದ್ದರು. ಗಾಝದ ಖಾಸಗಿ ವಾರ್ತಾ ಪ್ರಸಾರ ವ್ಯವಸ್ಥೆಯನ್ನು ಗಮನಿಸುವುದು ಇವರ ಕೆಲಸವಾಗಿತ್ತು. ಅಲ್‍ ಜಝೀರಾದ ಪತ್ರಕರ್ತರ ತನಿಖಾ ವರದಿಯಲ್ಲಿ ಈ ವಿವರ ಹೊರ ಬಂದಿದೆ.

ಹಮಾಸ್‍ನ ಪಟ್ರೋಲಿಂಗ್ ಪೋಸ್ಟ್‌ನಲ್ಲಿ ಶಂಕೆಯಾಧಾರಿತವಾಗಿ ಇವರನ್ನು ಹಿಡಿದು ನಲ್ವತ್ತು ಮೀಟರ್‍‌ವರೆಗೆ ಪ್ರಶ್ನಿಸಲಾಗಿತ್ತು. ಅಂದು ನಡೆದ ಆಕಾಶ ದಾಳಿಯಲಿ ಹಮಾಸ್‌ನ ಎರಡನೆ ಕಮಾಂಡರ್ ನೌರ್ ಬಾರಕ್ ಮತ್ತು ಆವರ ಸಹಾಯಕ ಮೃತಪಟ್ಟಿದ್ದರು. ಇಸ್ರೇಲಿ ಗುಪ್ತಚರ ವಿಭಾಗದ ಮುಖ್ಯಸ್ಥ ಅಂದು ಕೊಲೆಯಾಗಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಇಸ್ರೇಲಿನ ಬೇಹುಗಾರರು ಆಡಿಯೊ ಹೊರ ಬಿಟ್ಟಿದ್ದರು. ಖಾನ್ ಯೂನುಸ್‍ನಲ್ಲಿ ಇಸ್ರೇಲಿನ ಯುದ್ಧ ವಿಮಾನ ಆಕಾಶ ದಾಳಿ ನಡೆಸಿದ ಸಮಯದಲ್ಲಿ ಬೇಹುಗಾರ ತಂಡ ಹೆಲಿಕಾಪ್ಟರ್ ಮೂಲಕ ಇಸ್ರೇಲಿಗೆ ಪಾರಾಗಿತ್ತು.