ಐತಿಹಾಸಿಕ ಮಸೀದಿಯನ್ನು ಬಾರ್ ಮತ್ತು ಸಭಾಂಗಣವಾಗಿ ಮಾರ್ಪಡಿಸಿದ ಇಸ್ರೇಲ್

0
1217

ಸಫದ್ ನ ಇಸ್ರೇಲಿ ಪುರಸಭೆಯು ಅಲ್-ಅಹ್ಮರ್ ಮಸೀದಿಯನ್ನು ಬಾರ್ ಮತ್ತು ಸಭಾಂಗಣವಾಗಿ ಪರಿವರ್ತಿಸಿದೆ. ಅಲ್ ಖುದ್ಸ್ ಅಲ್-ಅರಬ್ ವರದಿ ಮಾಡಿದೆ.

ಅರಬ್ ನಗರದ ಅತ್ಯಂತ ಐತಿಹಾಸಿಕ ಮಸೀದಿಗಳಲ್ಲಿ ಒಂದು, 1948 ರಲ್ಲಿ ಯಹೂದಿಯರಿಂದ ಆಕ್ರಮಿಸಲ್ಪಟ್ಟಿ, ಈ ಕಟ್ಟಡವು ಅಂತಿಮವಾಗಿ ನೈಟ್ ಕ್ಲಬ್ ಆಗಿ ಮಾರ್ಪಾಡಾಗುವ ಮೊದಲು ಯಹೂದಿ ಶಾಲೆಯಾಗಿ , ನಂತರ ಲಿಕುಡ್ ನ ಚುನಾವಣಾ ಅಭಿಯಾನದ ಕೇಂದ್ರವಾಗಿ ಮತ್ತು ನಂತರ ಬಟ್ಟೆ ಗೋದಾಮಾಜಿ ಮಾರ್ಪಾಡಾಗಿತ್ತು. ಮಸೀದಿಯನ್ನು ಬಾರ್ ಮತ್ತು ವಿವಾಹ ಸಭಾಂಗಣವಾಗಿ ಬದಲಾಯಿಸಿರುವುದನ್ನು ಇಸ್ರೇಲ್ ಪುರಸಭೆಗೆ ಸಂಬಂಧಿಸಿರುವ ಸಂಸ್ಥೆಯು ಖಾತ್ರಿ ಪಡಿಸಿದೆ ಎಂದು ಲಂಡನ್ ಮೂಲದ ಪತ್ರಿಕೆ ವರದಿ ಮಾಡಿದೆ. ಇದರ ಹೆಸರನ್ನು ಅಲ್-ಅಹ್ಮರ್ ಮಸೀದಿಯಿಂದ ಖಾನ್ ಅಲ್-ಅಹ್ಮರ್ ಎಂದು ಬದಲಾಯಿಸಲಾಗಿದೆ.

ಖೈರ್ ತಬಾರಿ, ಸಫದ್ ಮತ್ತು ಟಿಬೆರಿಯಸ್ ಇಸ್ಲಾಮಿ ದತ್ತಿಗಳ ಕಾರ್ಯದರ್ಶಿಯು ಮಸೀದಿಯನ್ನು ಬಾರ್ ಆಗು ಮಾರ್ಪಡಿಸಿರುವುದನ್ನು ಪ್ರಶ್ನಿಸಿ ಮತ್ತು ಇಸ್ಲಾಮಿ ದತ್ತಿಗೆ ಹಿಂದಿರುಗಬೇಕೆಂದು ಮನವಿ ಸಲ್ಲಿಸಿದ್ದು, ಇದರ ಬಗ್ಗೆ ನಝರೆತ್ ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳಬೇಕಿದೆ. ಮಸೀದಿಯ ಇಸ್ಲಾಮಿ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಜೋಡಿಸಿರುವುದಾಗಿ ಕಾರ್ಯದರ್ಶಿ ಹೇಳಿದರು. ಮಸೀದಿಯನ್ನು ರಕ್ಷಿಸಲು ವಿವಿಧ ರಾಜಕೀಯ ಮತ್ತು ಜನಪ್ರಿಯ ಸಂಸ್ಥೆಗಳೊಂದಿಗೆ ತಮ್ಮ ಸಹಕಾರವನ್ನು ಹೆಚ್ಚಿಸಲು ಅವರು ಕರೆ ನೀಡಿದರು.

ಸಫೆದ್ ಪ್ರದೇಶವು 1948 ರಲ್ಲಿ ಬಲವಂತವಾಗಿ ಮನೆಗಳಿಂದ ಫೆಲೆಸ್ತೀನಿಯರನ್ನು ಹೊರದಬ್ಬಲಾದಾಗ 12,000 ಜನರನ್ನು ಹೊಂದಿತ್ತು .ಈಗ ಮಸೀದಿ ಮುಸ್ಲಿಮರ ಪ್ರಾರ್ಥನೆಗೆ ಹೊರತುಪಡಿಸಿ ಉಳಿದ ಎಲ್ಲ ಬಳಕೆಗೂ ಮುಕ್ತವಾಗಿದೆ ಎಂದು ತಬರಿ ಹೇಳಿದ್ದಾರೆ.

ವರದಿ: ಮಿಡ್ಲ್ ಈಸ್ಟ್ ಮಾನಿಟರ್