ಅದು ನಮಗೆ ಮಾಸ್ಕ್ ನಿಂದ ಮುಕ್ತಿ ನೀಡಲ್ಲ: ಯುಎಇಯಲ್ಲಿ ವ್ಯಾಕ್ಸಿನ್ ಪಡೆದ ಬಳಿಕ ನಟಿ ಶಿಲ್ಪಾ ಶಿರೋಡ್ಕರ್

0
225

ಸನ್ಮಾರ್ಗ ವಾರ್ತೆ

ಯುಎಇ: ಇತ್ತೀಚೆಗೆ ಯುಎಇಯಲ್ಲಿ ಕೊರೊನಾ ವೈರಸ್ ಲಸಿಕೆಯನ್ನು ಪಡೆದ ಹಿರಿಯ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್, “ನಾನು ಇನ್ನೂ ಮಾಸ್ಕ್ ನಿಂದ ಮುಕ್ತಿ ಪಡೆದಿಲ್ಲ. ಕೊರೋನಾ ವ್ಯಾಕ್ಸಿನ್ ನಮಗೆ ಮಾಸ್ಕ್ ನಿಂದ ಮುಕ್ತ ನೀಡುವುದಿಲ್ಲ. ಇದು ವೈರಸ್ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ ಅಷ್ಟೇ” ಎಂದು ಹೇಳಿದ್ದಾರೆ.

ನಾನು ಲಸಿಕೆ ಪಡೆದ ಬಳಿಕವೂ ಆರಾಮವಾಗಿದ್ದೇನೆ. ಯಾರೂ ವದಂತಿಗಳನ್ನು ನಂಬಬಾರದು. ನಮ್ಮ ಸುರಕ್ಷತೆಗಾಗಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದವರು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಮಾಹಿತಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ನಟಿ‌ ಶಿಲ್ಪಾರವರು ಯುಎಇ ಯಲ್ಲಿ ವ್ಯಾಕ್ಸಿನ್ ಪಡೆದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಕೊರೋನಾ ವ್ಯಾಕ್ಸಿನ್ ಪಡೆದ ಮೊದಲ ಬಾಲಿವುಡ್ ನಟಿ ಎಂಬ ಹೆಸರಿಗೂ ಪಾತ್ರರಾಗಿದ್ದಾರೆ.

ಶಿಲ್ಪಾ ರವರು ನಟಿ ನಮ್ರತಾ ಶಿರೋಡ್ಕರ್ (ದಕ್ಷಿಣ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪತ್ನಿ) ಅವರ ಸಹೋದರಿ. ಇವರು 1989 ರಲ್ಲಿ ಮಿಥುನ್ ಚಕ್ರವರ್ತಿ ಮತ್ತು ರೇಖಾ ಅವರೊಂದಿಗೆ ‘ಭ್ರಷ್ಟಾಚಾರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.