ಇಟಲಿಯ ಮುಸ್ಲಿಮರು ಮತ್ತು ಅಲ್ಲಿನ ಬಲಪಂಥೀಯ ಸರಕಾರ

0
624

ಶುಕ್ರವಾರ ಮಧ್ಯಾಹ್ನದ ನಂತರ ರೋಮ್‍ನ ದಕ್ಷಿಣ ನಗರಗಳಲ್ಲಿ ಮರದ ಬುಡದಲ್ಲಿ ಕೆಲವು ಮಂದಿ ಮಾತಾಡುತ್ತಿದ್ದರು. ಉತ್ತರ ಆಫ್ರಿಕದಿಂದ ಬಂದವರ ಅರಬಿ ಭಾಷೆಯಲ್ಲಿನ ಮಾತುಗಳನ್ನು ರೋಮನ್ ಭಾಷೆಗೆ ಭಾಷಾಂತರಿಸಿ ಅವರು ಮಾತಾಡುತ್ತಿದ್ದರು.

ಯುದ್ಧಾನಂತರ ಕಾಲದಲ್ಲಿ ಇಲ್ಲೊಂದು ಕಟ್ಟಡದಲ್ಲಿ ಇಲ್ಲಿ ಮಸೀದಿಯನ್ನು ಮಾಡಲಾಗಿದೆ. ಮುಸ್ಲಿಮರು ಇಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಕುತುಬ ಯಾನೆ ಭಾಷಣ ಆಲಿಸುತ್ತಿದ್ದರು. ಆದರೆ ಇತ್ತೀಚಿನಿಂದ ಮುಸ್ಲಿಮರಿಗೆ ಇಟಲಿಯಲ್ಲಿ ಸ್ವಾತಂತ್ರ್ಯ ಮಾಯವಾಗುತ್ತಿದೆ. ಇಂತಹ ಸ್ವಾತಂತ್ರ್ಯ ಕಬಳಿಕೆಯ ಯತ್ನ ಕೇವಲ ಇಟಲಿಯಲ್ಲಲ್ಲ ವಿಶ್ವಾದ್ಯಂತ ನಡಯುತ್ತಿದೆ. ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ ಎಂದು ಚುನಾವಣೆಯ ಸಂದರ್ಭದಲ್ಲಿ ಕೂಗು ಹಾಕಿದ ಫೈವ್‍ಸ್ಟಾರ್ ಮೂವ್‍ಮೆಂಟ್ ಇತ್ತೀಚೆಗೆ ಅಲ್ಲಿ ಅಧಿಕಾರಕ್ಕೆ ಬಂದಿದೆ, ಮುಂದೇನಾಗಬಹುದು ಎನ್ನುವ ಅನಿಶ್ಚಿತತೆ ಆತಂಕಗಳು ಅಲ್ಲಿನ ಮುಸ್ಲಿಮರ ಮನಸ್ಸಿನಲ್ಲಿ ಮಡುಗಟ್ಟಿ ನಿಂತಿದೆ.

ಇರಲಿ, ಇಟಲಿಯಲ್ಲಿ ಸರಕಾರದ ಅಧಿಕೃತ ಅಂಗೀಕಾರವಿರುವ ಮಸೀದಿಗಳ ಸಂಖ್ಯೆ ಬೆರಳೆಣಿಕೆ ಯಲ್ಲಿದೆ. ಆದರೆ ಅಂಗೀಕಾರ ಸಿಗದೆ ಹಲವಾರು ಪ್ರಾರ್ಥನಾ ಕೇಂದ್ರಗಳು ಇಟಲಿಯಲ್ಲಿವೆ. ಇದನ್ನು ಪ್ರೇಯರ್ ಹಾಲ್‍ಗಳೆಂದು ಕರೆಯುತ್ತಾರೆ. ಇಂತಹ ಐವತ್ತಕ್ಕೂ ಹೆಚ್ಚು ಪ್ರೇಯರ್ ಹಾಲ್‍ಗಳು ರೋಮ್‍ನಲ್ಲಿವೆ. ಇಸ್ಲಾಮ್ ಧರ್ಮವನ್ನು ಇಟಲಿಯಲ್ಲಿ ಅಧಿಕೃತವಾಗಿ ಅಂಗೀಕರಿಸಲಾಗಿಲ್ಲ.

ದೇಶದಲ್ಲಿರುವ ಅತೀ ದೊಡ್ಡ ಅಲ್ಪಸಂಖ್ಯಾತರು ಮುಸ್ಲಿಮರು 827ನೇ ಇಸವಿಯಲ್ಲಿ ಇಟಲಿಯ ಇಟಲಿಯು ಅಬ್ಬಾಸಿಯ ಖಿಲಾಫತ್‍ನ ಅಧೀನ ಗೊಂಡ ನಂತರ ಮುಸ್ಲಿಮರು ಅಲ್ಲಿ ನೆಲೆಸತೊಡಗಿ ದರು. ಈಗ ಒಟ್ಟು ಮುಸ್ಲಿಮರ ಜನಸಂಖ್ಯೆ 1,400.000 ಇದೆ. ಅಂದರೆ ಇಟಲಿಯ ಅಧಿಕೃತ ಜನಸಂಖ್ಯೆಯ ವಿವರಗಳಲ್ಲಿ ಮುಸ್ಲಿಮರು ಶೇ. 2.3ರಷ್ಟಿದ್ದಾರೆ ಎಂದಾಗಿದೆ. ಆದರೆ ಜನಸಂಖ್ಯೆಯ ಶೇ. 4ರಷ್ಟು ಮುಸ್ಲಿಮರಿದ್ದಾರೆ ಮತ್ತು ಅವರ ಜನಸಂಖ್ಯೆ 2.6 ಮಿಲಿಯನ್ ಆಗಿದೆ ಎಂದೂ ಹೇಳಲಾಗುತ್ತಿದೆ.
ಇಟಲಿಯಲ್ಲಿ ಬೇರೆ ಧರ್ಮಗಳು ಕೂಡ ಇವೆ. ಇಸ್ಲಾಮನ್ನು ಕೂಡ ಈ ರೀತಿ ನಿರ್ಧರಿಸುವ ಪ್ರಯತ್ನಗಳು ವಿಫಲವಾಗಿದೆ.

ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ದೇಣಿಗೆ ಸಂಗ್ರಹಿಸಲು ಅಲ್ಲಿ ಸಾಧ್ಯವಿಲ್ಲ. ಧಾರ್ಮಿಕ ರಜೆಗಳಿಗೂ ಮದುವೆ ಗಳಿಗೂ ಅಲ್ಲಿ ಕಾನೂನಿನ ರಕ್ಷಣೆಯಿಲ್ಲ. ಆದ್ದರಿಂದ ಆರಾಧಾನಾಲಯಗಳನ್ನು ಆರಂಭಿಸುವಲ್ಲಿ ದೇಶದಲ್ಲಿ ಯಾವುದೇ ಕಾನೂನು ಸಾಧ್ಯತೆಗಳಿಲ್ಲ. ಇಟಲಿಯ ಮುಸ್ಲಿಮರಲ್ಲಿ ಬಹುಬೇಗ ಹೊರಗಿನಿಂದ ಬಂದ ವಿದೇಶಿಯರು. ಒಂದು ಮಿಲಿಯನ್‍ನಷ್ಟು ಜನರು ಇಟಲಿಯಲ್ಲಿಯೇ ಜನಿಸಿದ್ದಾರೆ ಎನ್ನಲಾಗುತ್ತಿದೆ.

20ನೇ ಶತಮಾನದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚು ಅಭಿವೃದ್ಧಿ ಹೊಂದಿತ್ತು ಎನ್ನಲಾಗುತ್ತದೆ. ಸೋಮಾಲಿ ನಿರಾಶ್ರಿತರು ಮತ್ತು ಇಟಲಿಯನ್ ಸೋಮಾಲಿಯಾದಿಂದ ಲೆಂಡ್‍ನಿಂದ ಮುಸ್ಲಿಮರು ಇಲ್ಲಿಗೆ ಬಂದರು. ಜೊತೆಗೆ ಅಲ್ಬೇನಿಯ, ಬಾಂಗ್ಲಾದೇಶ, ಭಾರತ, ಮೊರಕ್ಕೊ, ಈಜಿಪ್ಟ್, ಟುನೀಶ್ಯದಿಂದ ಮುಸ್ಲಿಮರು ಇಲ್ಲಿಗಾಗಮಿಸಿದ್ದಾರೆ.

1993 ರಿಂದ ಪರಂಪರಾಗತವಾಗಿ ಪರಿಶ್ರಮ ಪಡುವ ಕಾರ್ಮಿಕ ವಿಭಾಗಗಳು ಸೆಂಟೊಸೆಲ್ಲಿಯಲ್ಲಿ ವಾಸಿಸುತ್ತಿವೆ. ಇವರಲ್ಲಿ ಹೆಚ್ಚಿನವರು ಆಫ್ರಿಕನ್ ಮೂಲದವರು. ಇಲ್ಲಿ ಮುಸ್ಲಿಮರು ಕ್ರೈಸ್ತರು ಮತ್ತು ಇತರ ವಿಭಾಗದ ಜನರು ಕೂಡ ನೆಲೆಸಿದ್ದಾರೆ. ಈ ಪರಿಶ್ರಮ ಜೀವಿಗಳಿಂದಾಗಿ ಈ ಪ್ರದೇಶ ಇಟಲಿಯ ಒಂದು ಸಾಂಸ್ಕೃತಿಕ ವೈವಿಧ್ಯ ತುಂಬಿದ ಪ್ರದೇಶ ಕೂಡ ಆಗಿದೆ.

ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿನ ಮುಸ್ಲಿಮರ ಭವಿಷ್ಯದಲ್ಲಂತೂ ಕಗ್ಗತ್ತಲೆ ಆವರಿಸಿದೆ. ಮುಸ್ಲಿಮರು ಇಲ್ಲಿ ಆತಂಕದಿಂದ ಜೀವಿಸಬೇಕಾಗಿದೆ.. ಇಲ್ಲಿನ ಕಟ್ಟಡಗಳ ಮೇಲೆ ಸ್ಥಳೀಯಾಡಳಿತಗಳು ನಿಯಂತ್ರಣ ವಿಧಿಸಿವೆ. ಮಸೀದಿಗಳನ್ನು ನಿರ್ಮಿಸು ವಂತಿಲ್ಲ. ಹಳೆಯದು ಇರುವ ಮಸೀದಿಗಳಿಗೆ ಬೀಗ ಜಡಿಯುತ್ತಿದ್ದಾರೆ. ಇನ್ನು ಅನಧಿಕೃತವಾಗಿ ನಿರ್ಮಾಣಗೊಂಡಿದೆ ಎಂಬ ನೆಪದಲ್ಲಿ ಎಂಟು ಪ್ರಾರ್ಥನಾ ಕೇಂದ್ರಗಳನ್ನು ಮತ್ತು ಇಸ್ಲಾಮಿಕ್ ಕಲ್ಚರ್ ಸೆಂಟರ್‍ಗಳನ್ನು ಮತ್ತು ಪ್ರೇಯರ್ ಹೋಮ್ಸ್‍ಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.

2016ರ ಅಕ್ಬೋಬರ್‍ನಲ್ಲಿ ರೋಮ್‍ನ ಕೊಲೀಸಿಯಂ ಎನ್ನುವ ಸ್ಥಳದಲ್ಲಿ ಆರಾಧನೆಗಾಗಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರದೇಶದಲ್ಲಿ ಅನಧಿಕೃತ ಮಸೀದಿಗಳಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಮುಸ್ಲಿಂ ಸಮುದಾಯದೊಂದಿ ಗಿರುವ ಹೆದರಿಕೆ ಮತ್ತು ದ್ವೇಷದಿಂದಾಗಿ ಸರಕಾರ ಮತ್ತು ಮಾಧ್ಯಮಗಳು ಕೈಜೋಡಿಸಿ ಅಪಪ್ರಚಾರ ಮಾಡುತ್ತಿವೆ. ಅಂದು ರೋಮ್‍ನಲ್ಲಿ ಮುಚ್ಚಲಾದ ಹೆಚ್ಚಿನ ಆರಾಧಾನಾಲಯಗಳು ನಂತರ ತೆರೆಯಲಾಯಿತು.

ಇಟಲಿಯ ಹೊಸ ಬಲಪಂಥೀಯ ಸರಕಾರದ ಕ್ರಮಗಳು ಮುಸ್ಲಿಮರನ್ನು ಅರಕ್ಷಿತ ಸ್ಥಿತಿಗೆ ತಲು ಪಿಸಿದೆ. ಇಸ್ಲಾಮ್ ವಿರೋಧಿ-ವಲಸೆ ವಿರೋಧಿ ಪರಸ್ಪರ ಒಗ್ಗಟ್ಟಿಗೆ ವಿರುದ್ಧ ಇರುವ ಫೈವ್‍ಸ್ಟಾರ್ ಮೂವ್‍ಮೆಂಟ್ ಇಟಲಿಯಲ್ಲಿ ಹೊಸ ಸರಕಾರ ರಚಿಸಿದೆ. ಮುಸ್ಲಿಂ ಸಮುದಾಯದೊಂದಿಗೆ ಹೊಸ ಸರಕಾರ ಯಾವ ನಿಲುವನ್ನು ತಳೆಯುತ್ತದೆ ಎನ್ನುವುದು ತಿಳಿದಿಲ್ಲ.

ಈ ವಿಷಯದಲ್ಲಿ ಇಲ್ಲಿ ಅನಿ ಶ್ಚಿತತೆ ಮುಂದುವರಿಯುತ್ತಿದೆ ಎಂದು ಸೆಂಟೊಸೆಲ್ಲಿ ಮಸೀದಿಯ ಇಮಾಮ್ ಮುಹಮ್ಮದ್ ಬಿನ್ ಮುಹಮ್ಮದ್ ಹೇಳುತ್ತಾರೆ. ದೇಶದಲ್ಲಿರುವ ಎಲ್ಲ ಮಸೀದಿಗಳನ್ನು ಮುಚ್ಚಲಾಗುವುದು ಎಂದು ಚುನಾವಣಾ ಪ್ರಚಾರದ ವೇಳೆ ಸಾಲ್ವಿನಿ ಹೇಳಿದ್ದರು. ಹೊಸ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದು ಘೋಷಿಸಿದ್ದರು. ಇದು ಅವರ ಪ್ರೊಪಗಾಂಡ ಎಂದು ಮುಹಮ್ಮದ್ ಹೇಳುತ್ತಾರೆ. ಇಟಲಿಯನ್ನು ಇಸ್ಲಾಮೊಫೋಬಿಯ ಆವರಿಸುತ್ತಿದೆ.

ಫೈವ್‍ಸ್ಟಾರ್ ಮೂವ್‍ಮೆಂಟಿನವರು ಮುಂದೇನು ಮಾಡು ತ್ತಾರೋ ಕಾದುನೋಡಬೇಕು. ಇಮಾಮರ ಮಾತಿ ನಲ್ಲಿರುವುದು ಬರೇ ಆತಂಕವಲ್ಲ, ಅನಿಶ್ಚಿತತೆ ಕೂಡಾ.