ಸಚಿವ ಸಂಪುಟ ಸಭೆ ನಡೆಸಿ ಕುಸಿದು ಬಿದ್ದು ನಿಧನರಾದ ಐವರಿಕೊಸ್ಟ್ ಪ್ರಧಾನಿ

0
223

ಸನ್ಮಾರ್ಗ ವಾರ್ತೆ

ದಾಕರ್,ಸೆನಗಲ್,ಜು.10: ಐವರಿಕೋಸ್ಟ್ ಪ್ರಧಾನಿ ಅಮದೋವ್ ಗೊನ್ ಕೌಲಿಬಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಅವರು ಕುಸಿದು ಬಿದ್ದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕೂಡಲೇ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಅಮದೊವ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಅವರು ಎರಡು ತಿಂಗಳವರೆಗೆ ಫ್ರಾನ್ಸಿನಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೋಬರಿನಲ್ಲಿ ಅಧ್ಯಕ್ಷ ಚುನಾವಣೆ ನಡೆಯಲಿತ್ತು. ಆಡಳಿತ ಪಕ್ಷದಿಂದ ಅವರನ್ನೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನೇಮಕಗೊಳಿಸಲಾಗಿತ್ತು.

ಈಗಿನ ಅಧ್ಯಕ್ಷ ಅಲಸಾನೆ ಔಟ್ಟಾರೆ ಪ್ರಧಾನಿಯ ನಿಧನಕ್ಕೆ ಶೋಕ ಸೂಚಿಸಿದ್ದಾರೆ. ನನ್ನ ಪುತ್ರ, ನನ್ನ ಸಹೋದರ ಎಂದು ಹೇಳುತ್ತಾ ಅಮದೋವ್‍ರಿಗೆ ಅವರ ಕಂಬನಿ ಅರ್ಪಿಸಿದ್ದಾರೆ. ಮೂರನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿದ ಅಲಸಾನೆ ಅಮದೋವ್‍ರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.