ಜೈಷೆ ಉಗ್ರ ಮಸೂದ್ ಅಝರ್‍ ಗೆ ಯಾವುದೇ ಸಹಾನುಭೂತಿ ತೋರಿಸಬೇಡಿ, ಆತ ನನ್ನನ್ನೂ ಕೊಲ್ಲಲು ಯತ್ನಿಸಿದ್ದ- ಪಾಕ್ ಮಾಜಿ ಪ್ರಧಾನಿ

0
619

ಪಾಕಿಸ್ತಾನ: ಜೈಷೆ ಮುಹಮ್ಮದ್‍ ಮುಖ್ಯಸ್ಥನಿಗೆ ಯಾವುದೇ ಸಹಾನುಭೂತಿ ತೋರಿಸಬಾರದು. ಆತ ತನ್ನನ್ನೂ ಕೊಲ್ಲಲು ಯತ್ನಿಸಿದ್ದ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಹೇಳಿದ್ದಾರೆ.

“ನನಗೆ ಅವನ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ ಎಂದು ಮುಶರ್ರಫ್ ಇಂಡಿಯ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಮಸೂದ್ ಅಝರನ ಜೈಷೆ ಮುಹಮ್ಮದ್ ಸಂಘಟನೆಯನ್ನು ಮುಶರ್ರಫ್ 2002ರಲ್ಲಿ ನಿಷೇಧಿಸಿದ್ದರು. ನಂತರ ಜೈಷೆ ಉಗ್ರರು 2003ರಲ್ಲಿ ಮುಶರ್ರಫ್ ಕೊಲೆಗೆ ಯತ್ನಿಸಿದ್ದರು.

ಪುಲ್ವಾಮದಲ್ಲಿ ಭಾರತದ ಯೋಧರ ಸಾವು ವಿಷಾದನೀಯ ಮತ್ತು ತೀರ ಆತಂಕದ ವಿಷಯವಾಗಿದೆ. ಪಾಕಿಸ್ತಾನದ ಸರಕಾರ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇಲ್ಲ ಎಂದು ಮುಶರ್ರಫ್ ಖಚಿತವಾಗಿ ಹೇಳಿದರು.

“ಜೆಇಎಂನ ಕುರಿತು ಇಮ್ರಾನ್ ಖಾನ್ ಸಹಾನುಭೂತಿ ಹೊಂದಿದ್ದಾರೆ ಎಂದು ನಾನು ಭಾವಿಸಲಾರೆ. ಪಾಕಿಸ್ತಾನ ಸರಕಾರ ಇದರಲ್ಲಿ ಭಾಗಿಯಾಗಿದೆ ಎಂದು ನಾನು ನಂಬುವುದಿಲ್ಲ” ಎಂದು ಅವರು ಹೇಳಿದರು.

“ಭಾರತ ಪಾಕಿಸ್ತಾನದ ಕುರಿತು ತಪ್ಪಾಗಿ ಆರೋಪಿಸುತ್ತಿದೆ. ಇದನ್ನು ನಿಲ್ಲಿಸಬೇಕು ಎಂದರು. ಫೆಬ್ರುವರಿ 14ರಂದು ಭಯೋತ್ಪಾದನಾ ದಾಳಿಯಲ್ಲಿ ಕಾಶ್ಮೀರದಲ್ಲಿ 40 ಮಂದಿ ಯೋಧರು ವೀರಮೃತ್ಯುವನ್ನಪ್ಪಿದ್ದರು.