ರವೂಫ್ ಪ್ರಕರಣ: ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಸ್ವಾಸ್ತ್ಯ ಕೆಡಿಸುವ ಮಾಧ್ಯಮಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ; ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ

0
594

ಸನ್ಮಾರ್ಗ ವಾರ್ತೆ-

ಮಂಗಳೂರು: ಆ. 20- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಮೂಲಕ ಫೋನ್ ಕರೆಗಳು ಹೋಗಿದ್ದವು ಎಂಬ ಮಾಹಿತಿ ಮೇರೆಗೆ ಬೆಳ್ತಂಗಡಿ ರವೂಫ್ ಎಂಬ ಹೆಸರಿನ ಧಾರ್ಮಿಕ ಅಧ್ಯಾಪಕರನ್ನು ಎನ್ಐಎ ವಶ ಪಡೆದಿದೆ ಎಂಬ ಹಸಿ ಹಸಿ ಸುಳ್ಳನ್ನು ಬಿತ್ತರಿಸಿದ ಕರ್ನಾಟಕದ ಸುದ್ದಿ ಮಾಧ್ಯಮಗಳ ಕ್ರಮವನ್ನು ಜಮಾತೆ ಇಸ್ಲಾಮಿ ಹಿಂದ್ ದಕ್ಷಿಣ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ.

ಈ ಚಾನೆಲ್ ಗಳು ಈ ಮುಂಚೆಯೂ ಇದೇ ರೀತಿ ಒಂದು ಸಮುದಾಯದ ವಿರುದ್ಧ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಸ್ವಾಸ್ತ್ಯ ಕೆಡಿಸಿದ ಅಪಖ್ಯಾತಿಯನ್ನು ಹೊಂದಿದ್ದು, ಇದು ಅದರ ಮುಂದುವರಿಕೆಯಾಗಿದೆ. ಇಂತಹ ಚಾನೆಲ್ ಗಳ ವಿರುದ್ಧ ಸರಕಾರ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ.

ಸುಳ್ಳು ಕಥೆ ಕಟ್ಟಿ ಧರ್ಮಗುರು ರವೂಫ್ ರಿಗೆ ಉಗ್ರ ಪಟ್ಟ ಕಟ್ಟಿ ಮುಸ್ಲಿಂ ಸಮುದಾಯವನ್ನು ಪೂರ್ವಗ್ರಹ ಪೀಡಿತವಾಗಿ ಟಾರ್ಗೆಟ್ ಮಾಡುತ್ತಿರುವ ಮಾಧ್ಯಮ ಭಯೋತ್ಪಾದನೆಯ ವಿರುದ್ಧ ಪ್ರಜ್ಞಾವಂತ ನಾಗರಿಕರು ಧ್ವನಿಯೆತ್ತಬೇಕಾಗಿದೆ. ಈ ಸಂದರ್ಭದಲ್ಲಿ ಸಂತ್ರಸ್ತ ರವೂಫ್ ರಿಗೆ ನ್ಯಾಯದ ಹೋರಾಟದಲ್ಲಿ ಜಮಾಅತ್ ಕೂಡ ಬೆಂಬಲ ವ್ಯಕ್ತ ಪಡಿಸುತ್ತದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.