ಜಾಮಿಅ ಮಿಲ್ಲಿಯ ಇಸ್ಲಾಮೀಯ: ದೂರ ಶಿಕ್ಷಣಕ್ಕೆ ಅರ್ಜಿ ಆಹ್ವಾನ

0
664

ಪೆರಿಂದಲ್‍ಮಣ್ಣ: ಶಾತಂಪುರಂ ಅಲ್ ಜಾಮಿಅ ಅಲ್ ಇಸ್ಲಾಮಿಯದಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರ ವಿಶ್ವ ವಿದ್ಯಾನಿಲಯವಾದ  ಜಾಮಿಅ ಮಿಲ್ಲಿಯ ಇಸ್ಲಾಮಿಯ ಸೆಂಟರ್ ಫಾರ್ ಡಿಸ್ಟನ್ಸ್ ಆಂಡ್ ಓಪನ್ ಲರ್ನಿಂಗ್ 2018-19 ಅಧ್ಯಯನ ವರ್ಷದಲ್ಲಿ ನಡೆಸುವ  ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ ಗಳಿಗೆ ದೂರ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಯನ್ನು ಆಹ್ವಾನಿಸಿದೆ.

ಕೋರ್ಸುಗಳು, ಪಿಜಿ, ಡಿಪ್ಲೊಮ ಇನ್ ಗೈಡೆನ್ಸ್ ಆಂಡ್ ಕೌನ್ಸಿಲಿಂಗ್ (ಪಿಜಿ ಡಿಜಿಸಿ) ಅರ್ಹತೆ, ಪದವಿ ಅಲ್ಲದಿದ್ದರೆ ತತ್ಸಮಾನ ಸರ್ಟಿಫಿಕೆಟ್,  ನರ್ಸರಿ ಟೀಚರ್ ಡಿಪ್ಲೋಮ ಇನ್ ಅರ್ಲಿ ಚೈಲ್ಡ್ ಕೇರ್ ಆಂಡ್ ಎಜುಕೇಶನ್(ಡಿಇಸಿಸಿಇ) ಸರ್ಟಿಫಿಕೆಟ್ ಇನ್ ಕಂಪ್ಯೂಟರ್  ಹಾರ್ಡ್‍ವೇರ್ ಆಂಡ್ ನೆಟ್‍ವರ್ಕ್ ಟೆಕ್ನಾಲಜಿ,. ಅರ್ಹತೆ ಹೈಯರ್ ಸೆಕಂಡರಿ ಅಥವಾ ಅಲ್ಲದಿದ್ದರೆ ತತ್ಸಮಾನ ಸರ್ಟಿಫಿಕೆಟ್, ಸರ್ಟಿಫಿಕೆಟ್ ಇನ್ ಇನ್ಫೋರ್ಮೇಶನ್ ಟೆಕ್ನಾಲಜಿ, ಅರ್ಹತೆ: ಎಸೆಸೆಲ್ಸಿ.
ಅರ್ಜಿಶುಲ್ಕ 500 ರೂಪಾಯಿ. ಅರ್ಜಿ ಫಾರಂ ಮತ್ತು ಪ್ರಾಸ್ಪೆಕ್ಟಸ್‍ಗೆ www.jmi.ac.in/cdol ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.ಅರ್ಜಿಫಾರಂ ತುಂಬಿ ಅಗತ್ಯ ದಾಖಲೆಗಳನ್ನು ಹಾಗೂ ಅರ್ಜಿ ಶುಲ್ಕ ಕೋರ್ಸ್ ಶುಲ್ಕ ಇದರ ಜೊತೆಗೆ ಕಳುಹಿಸಿಕೊಡಬೇಕಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ತಾರೀಕು 2019 ಫೆಬ್ರುವರಿ 11 ವಿಳಾಸ ಅಲ್ ಜಾಮಿಅ ಅಲ್ ಇಸ್ಲಾಮಿಯ ಸೆಂಟರ್ ಫಾರ್ ಡಿಸ್ಟೆನ್ಸ್ ಆಂಡ್  ಓಪನ್ ಲರ್ನಿಂಗ್ ಶಾಂತಪುರಂ ಪಟ್ಟಿಕ್ಕಾಡ್ (ಪಿಒ), ಮಲಪ್ಪುರಂ-679325. ಫೋನ್ 9207945556, 04933270439. ಅರ್ಜಿ ನಿಬಂಧನೆಗಳು ವೆಬ್‍ಸೈಟ್‍ನಲ್ಲಿ ಲಭ್ಯವಿದೆ.