ಪಿಯುಸಿ ಸೇರಿದ ಜಾರ್ಖಂಡ್ ಶಿಕ್ಷಣ ಸಚಿವ; ಕಲಿಕೆಗೆ ವಯಸ್ಸಿನ ಮಿತಿಯಿಲ್ಲ

0
116

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.11: ಸಚಿವರು ಹತ್ತನೆಯ ತರಗತಿವರೆಗೆ ಮಾತ್ರ ಕಲಿತಿದ್ದಾರೆ ಎಂಬ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿದ ಝಾರ್ಕಂಡ್ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಸಚಿವ ಜಗರ್‌ನಾಥ್ ಮಹತೊ ಪ್ರಥಮ ಪಿಯುಸಿಗೆ ದಾಖಲಾಗಿದ್ದಾರೆ.

53 ವರ್ಷದ ಜಗರ್‌‌ನಾಥ್ 25 ವರ್ಷದ ಬಳಿಕ ಕಲಿಕೆ ಮುಂದುವರಿಸುತ್ತಿದ್ದಾರೆ. ಬೊಕರೊ ಜಿಲ್ಲೆಯ ದೇವಿ ಮಹತೊ ಇಂಟರ್ ಕಾಲೇಜಿನಲ್ಲಿ ಹನ್ನೊಂದನೆ ತರಗತಿಗೆ ಇವರು ಪ್ರವೇಶ ಪಡೆದಿದ್ದಾರೆ.

1995ರಲ್ಲಿ ಬಿಹಾರ್ ಸ್ಕೂಲ್ ಎಕ್ಸಾಮಿನೇಶನ್ ಬೋರ್ಡಿನ ಅಧೀನದಲ್ಲಿ ಟೆಲೊಯದ ನೆಹರೂ ಹೈಸ್ಕೂಲಿನಲ್ಲಿ ಸೆಕಂಡ್ ಕ್ಲಾಸಿನಲ್ಲಿ ಜಗರ್‍ನಾಥ್ ಎಸೆಸೆಲ್ಸಿ ಪಾಸಾಗಿದ್ದರು. ಕಲಿಕೆ ಮುಂದುವರಿಸಲು ಅವರಿಂದಾಗಿರಲಿಲ್ಲ. ನಂತರ ಬಿಹಾರದಿಂದ ಪ್ರತೇಕ ಜಾರ್ಖಂಡ್ ರಾಜ್ಯದ ಆಂದೋಲನದಲ್ಲಿ ಭಾಗವಹಿಸಿದರು. ಈ ರೀತಿ ಅವರು ರಾಜಕೀಯ ಪ್ರವೇಶಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.