ಜಮಾಅತೆ ಇಸ್ಲಾಮೀ ಜಮ್ಮು & ಕಾಶ್ಮೀರ ರಾಜ್ಯ ಅಧ್ಯಕ್ಷರಾಗಿ ಹಮೀದ್ ಫಯಾಜ್ ಆಯ್ಕೆ

0
705

ಜಮಾಅತೆ ಇಸ್ಲಾಮೀ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಅಧ್ಯಕ್ಷರಾಗಿ ಹಮೀದ್ ಫಯಾಜ್ ರವರು ಆಯ್ಕೆಯಾಗಿದ್ದಾರೆ.
೧೬೦ ಮತಗಳಲ್ಲಿ ಒಟ್ಟು ೭೯ ಮತಗಳನ್ನು ಪಡೆಯುವುದರ ಮೂಲಕ ಹಮೀದ್ ಫಯಾಜ್ ರವರು ರಾಜ್ಯ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ್ದಾರೆ.
೧೯೫೭ ರಲ್ಲಿ ಜನಿಸಿದ ಫಯಾಜ್ ರವರು ಇಸ್ಲಾಮಿಕ್ ಸ್ಟಡೀಸ್ ನಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆದಿದ್ದು ಮೂಲತಃ ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯವರಾಗಿದ್ದಾರೆ.
೧೯೭೮ ರಲ್ಲಿ ಅವರು ಜಮಾಅತೆ ಇಸ್ಲಾಮೀ ತಲಬಾ ಸೇರ್ಪಡೆಯಾದರು ಮತ್ತು ಸೋಫಿಯಾನ್ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಜಮಾಅತೆ ಇಸ್ಲಾಮೀ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.