ಜಮಾಅತೆ ಇಸ್ಲಾಮೀ ಕರ್ನಾಟಕ ವತಿಯಿಂದ ನೂತನ ಶಿಕ್ಷಣ ನೀತಿಯ ಕುರಿತು ಲೈವ್ ಕಾರ್ಯಕ್ರಮ

0
337

ಸನ್ಮಾರ್ಗ ವಾರ್ತೆ

ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದ ನೂತನ ಶಿಕ್ಷಣ ನೀತಿ-2೦20 ಬಗ್ಗೆ ಪ್ರಸಕ್ತ ಆಗು-ಹೋಗುಗಳನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ಇಂದು (ಶನಿವಾರ) ಅಪರಾಹ್ನ 3 ಗಂಟೆಗೆ ಆನ್‌ಲೈನ್ ಲೈವ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಮುಖ್ಯ ಅತಿಥಿಗಳಾಗಿ ಡಾ| ಸಯ್ಯದ್ ನಾಸಿರ್ ಹುಸೈನ್ (ಎಂ.ಪಿ.) ಮತ್ತು ಜ| ಸಯ್ಯದ್ ತನ್ವೀರ್ ಅಹ್ಮದ್ (ನಿರ್ದೇಶಕರು, ಕೇಂದ್ರ ಶಿಕ್ಷಣ ಮಂಡಳಿ, ಜ.ಇ. ಹಿಂದ್) ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಜೆಐಹೆಚ್ ರಾಜ್ಯಾಧ್ಯಕ್ಷರಾದ ಡಾ| ಬೆಳ್ಗಾಮೀ ಮುಹಮ್ಮದ್ ಸಾದ್ ವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ವಿಕ್ಷೀಸಲು JIH Katnataka ಫೇಸ್‌ಬುಕ್ ಹಾಗೂ ಯೂಟ್ಯೂಬ್ ಚಾನೆಲ್‌‌ನಲ್ಲಿ ವೀಕ್ಷಿಸಬಹುದು.