ಗುಂಪು ಹತ್ಯೆ: ರಾಷ್ಟ್ರಪತಿ ಭೇಟಿಗೆ ತೀರ್ಮಾನಿಸಿದ ಜಮಾಅತೆ ಇಸ್ಲಾಮಿ ಹಿಂದ್ 

0
769

ನವದೆಹಲಿ:  ದೇಶದಲ್ಲಿ ದಿನೇ ದಿನೇ ಭುಗಿಲೇಳುತ್ತಿರುವ ಗುಂಪು ಹತ್ಯೆಗಳ ಕಡಿವಾಣಕ್ಕೆ ಆಗ್ರಹಿಸಿ ಜಮಾಅತೆ ಇಸ್ಲಾಮೀ ಹಿಂದ್ ಇತರೆ ಧಾರ್ಮಿಕ ನಾಯಕರ ನಿಯೋಗದೊಂದಿಗೆ ರಾಷ್ಟ್ರಪತಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ.
ಗುಂಪುಹತ್ಯೆಗಳನ್ನು ಅಕ್ರಮ ಜಾನುವಾರು ಸಾಗಾಟ, ಮಕ್ಕಳ ಅಪಹರಣ ಶಂಕೆಯಂತಹ ಕಾರಣಗಳಿಂದಾಗಿ ನಡೆಸಲಾಗುತ್ತಿದ್ದು ಅಮಾಯಕ ಜನರನ್ನು ಥಳಿಸಿ ಕೊಲ್ಲಲಾಗುತ್ತಿದೆ. ಇದಲ್ಲದೇ ಕೆಲವು ರಾಜಕೀಯ ನಾಯಕರು ತಮ್ಮ ದ್ವೇಷ ರಾಜಕಾರಣವನ್ನು ಅಸ್ತ್ರವಾಗಿಸಿಕೊಂಡಿದ್ದು ಗೃಹ ಸಚಿವರ ಸ್ಥಾನದಲ್ಲಿದ್ದುಕೊಂಡೂ ಅಪರಾಧಿಗಳಿಗೆ ಸನ್ಮಾನ ಮಾಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ಗುಂಪುಹತ್ಯೆಗಳಿಗೆ ಪ್ರೇರಣೆ ನೀಡಿದಂತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ಪ್ರಧಾನ ಕಾರ್ಯದರ್ಶಿ ಡಾ.ಸಲೀಮ್ ಇಂಜನೀಯರ್ ರವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಅಸ್ಸಾಂ ಪೌರತ್ವ ವಿವಾದದ ಕುರಿತು ಜ.ಇ.ಹಿಂದ್ ನ ಉಪಾಧ್ಯಕ್ಷರಾದ ನುಸ್ರತ್ ಅಲಿಯವರು ಮಾತನಾಡಿದರು.
ವಿಧಿ 377 ನ್ನು ರದ್ದು ಪಡಿಸುವ ಮೂಲಕ ಸಲಿಂಗ ವಿವಾಹಕ್ಕೆ ಸಂಬಂಧಿಸಿ ಜ.ಇ.ಹಿಂದ್ ನ ರಾಷ್ಟ್ರ ಅಧ್ಯಕ್ಷರಾದ ಮೌಲಾನ ಸೈಯ್ಯದ್ ಜಲಾಲುದ್ದೀನ್ ಉಮರಿಯವರು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ,, ಸುಪ್ರೀಂ ಕೋರ್ಟ್ ವಿಧಿ 377ನ್ನು ಪುನರ್ ಪರಿಶೀಲನೆ ಮಾಡಲು ತೀರ್ಮಾನ ಕೈಗೊಂಡಿರುವುದು ಸಮಂಜಸವಲ್ಲ. ಕಾನೂನಾತ್ಮಕವಾಗಿ ಸಲಿಂಗ ವಿವಾಹವು ಶಿಕ್ಷಾರ್ಹ ಅಪರಾಧಾವಾಗಿದ್ದು ಇದು ಕುಟುಂಬ ವ್ಯವಸ್ಥೆಯನ್ನು ಬುಡಮೇಲುಗೊಳಿಸಿವುದು ಮತ್ತು ಪ್ರಾಕೃತಿಕ ಮಾನವ ವಿಕಾಸಕ್ಕೆ ವಿರುದ್ಧವಾದುದು” ಎಂದರು