ಜೋಪಡಿಯಿಂದ ಶಾಂತಿಧಾಮದೆಡೆಗೆ: ಜಮಾಅತೆ ಇಸ್ಲಾಮೀ ವತಿಯಿಂದ ಮನೆ ಹಸ್ತಾಂತರ

0
832

ಸಮಾಜ ಸೇವಾ ಘಟಕ, ಜಮಾ‌ಅತೆ‌ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ವತಿಯಿಂದ, ಅಡ್ಡೂರು ಸಮೀಪದ ಪುಂಚಮಿಯ ಕಿನ್ನಿಗುಡ್ಡೆ ಎಂಬಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಬದುಕು ಸವೆಸುತ್ತಿದ್ದ ವಿಧವೆ ಹಾಗೂ ಆಕೆಯ ಆರು ಅನಾಥ ಮಕ್ಕಳಿಗೆ ತಂಗಲು ದಾನಿಗಳ ನೆರವಿನಿಂದ ಅವಶ್ಯಕ ಸವಲತ್ತುಗಳುಳ್ಳ ಚೆಂದದ ಮನೆ ನಿರ್ಮಿಸಿ ಕೊಡಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ನಗರ ಶಾಖೆಯ ಅಧ್ಯಕ್ಷರಾದ ಜ| ಮುಹಮ್ಮದ್ ಕುಂಞಿಯವರು ಮನೆ ಹಸ್ತಾಂತರ ಕಾರ್ಯವನ್ನು ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್‌ ಮದನಿಯವರು ಸಮೋರೋಪ ಉಪದೇಶಗಳನ್ನು ನೀಡಿ ಕುಟುಂಬಕ್ಕೂ ಸರ್ವ ರೀತಿಯಲ್ಲಿ ಸಹಕರಿಸಿದ ದಾನಿಗಳಿಗೆ ಪ್ರಾರ್ಥಿಸಿದರು.

ಮನೆ ನಿರ್ಮಾಣದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸಮೀಪದಲ್ಲೇ ಬಾಡಿಗೆ ಮನೆ ಮತ್ತು ಮಾಸಿಕ ರೇಶನ್‌ನ ವ್ಯವಸ್ಥೆ ಮಾಡಿ ಕೊಡಲಾಗಿತ್ತು. ಇಂದು ಆ ಕುಟುಂಬದ ಮುಖದಲ್ಲಿ ಸಂತೋಷ ಮತ್ತು ಖುಷಿ ಅರಳಿದ್ದು ಈ ಉತ್ತಮ ಕಾರ್ಯಕ್ಕಾಗಿ ಸಹಕರಿಸಿದ ಎಲ್ಲ ಸಹೃದಯಿ ದಾನಿಗಳಿಗೆ ಜಮಾಅತೆ ಇಸ್ಲಾಮೀ ಸಮಾಜ ಸೇವಾ ಘಟಕವು ಕೃತಜ್ಞತೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕರಾದ ಮುಹಮ್ಮದ್ ಇಸ್‌ಹಾಕ್‌ ಹಾಗೂ ಜಮಾಅತೆ ಇಸ್ಲಾಮೀ ಎಡಪದವು ಶಾಖೆಯ ಅಧ್ಯಕ್ಷರಾದ ಸುಲೈಮಾನ್‌ ಕಲ್ಲಾಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.