ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಜಿಐಓ ಮನವಿ

0
4348

ಮಂಗಳೂರು: ಜು. 6, ಕಾಲೇಜು ವಿದ್ಯಾರ್ಥಿನಿಯ ಮೇಲೆ ಪುತ್ತೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಕರ್ನಾಟಕ (ಜಿ ಐ ಓ) ಇದರ ದ ಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಕುಮಾರ್ ಸ್ವೀಕರಿಸಿದರು. ನಿಯೋಗದಲ್ಲಿ ಜಿಐಓ ರಾಜ್ಯಾಧ್ಯಕ್ಷೆ ಹುಮೈರಾ ಬಾನು, ಅನುಪಮ ಸಂಪಾದಕಿ ಮತ್ತು ಕೌನ್ಸಿಲರ್ ಶಹನಾಜ್ ಎಂ, ಜಿಐಓ ಸದಸ್ಯೆ ಮುಷೀರ, ತಸ್ಲೀಮ, ನಸೀಹ ಮುನವ್ವರ್ ಇದ್ದರು.

ಮನವಿ ಹೀಗಿದೆ:

ವಿದ್ಯಾವಂತರೇ ಹೆಚ್ಚಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೆ ಒಳಪಡಿಸಿದ ಕೃತ್ಯಗಳು ಕಳೆದೊಂದು ವಾರದಲ್ಲಿ ನಡೆದಿವೆ. ಮಂಗಳೂರಿನ ದೇರಳಕಟ್ಟೆಯ ಸಮೀಪದ ಬಗಂಬಿಲದಲ್ಲಿ ವಿದ್ಯಾರ್ಥಿನಿಯೋರ್ವಳನ್ನು ಚೂರಿಯಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದ ಘಟನೆ ನಡೆದ ನಾಲ್ಕೈದು ದಿನಗಳೊಳಗಾಗಿ ಪುತ್ತೂರಿನಲ್ಲಿ ಬೆಚ್ಚಿ ಬೀಳಿಸುವ ಎರಡು ಕ್ರೌರ್ಯಗಳು ನಡೆದಿವೆ. ಈ ಎರಡೂ ಪ್ರಕರಣಗಳಲ್ಲಿ ಬಲಿಪಶು ಹೆಣ್ಣೇ. ಕಾಲೇಜು ತರುಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಈ ಘಟನೆಗಳು ಹೆಣ್ಣು ಹೆತ್ತ ಪೆÇೀಷಕರನ್ನು ತೀವ್ರ ಆತಂಕಕ್ಕೆ ದೂಡಿದೆ. ಶಾಲಾ-ಕಾಲೇಜಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಬಗ್ಗೆ ಅವರಲ್ಲಿ ಭಯ ಉಂಟಾಗಿದೆ. ಈ ಭಯ ಮತ್ತು ಆತಂಕವನ್ನು ದೂರ ಮಾಡುವ ಸಾಮಥ್ರ್ಯ ಮತ್ತು ಹೊಣೆಗಾರಿಕೆ ಜಿಲ್ಲಾಡಳಿತಕ್ಕೆ ಮಾತ್ರವೇ ಇರುವುದರಿಂದ ಈ ಮನವಿ ಸಲ್ಲಿಸುತ್ತಿದ್ದೇವೆ.

1. ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯದಲ್ಲಿ ಅಮಲು ಪದಾರ್ಥಗಳಿಗೆ ಬಹುಮುಖ್ಯ ಪಾತ್ರವಿದೆಯೆಂಬುದು ಜಿ.ಐ.ಓ.ನ ಖಚಿತ ಅಭಿಪ್ರಾಯ. ಎಳೆಪ್ರಾಯದ ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಅಮಾನುಷ ಕೃತ್ಯ ಎಸಗಲು ಇಂಥ ಅಮಲು ಪದಾರ್ಥಗಳ ಸೇವನೆಯ ಹೊರತು ಸುಲಭ ಅಲ್ಲ. ಈ ಹಿನ್ನೆಲೆಯಲ್ಲಿ, ಶಾಲಾ ಕಾಲೇಜುಗಳ ಹೊಣೆಗಾರರನ್ನು ಕರೆದು ಈ ಮೇಲಿನ ವಿಷಯದಲ್ಲಿ ಚರ್ಚಿಸಿ ವಿದ್ಯಾರ್ಥಿನಿಯರಲ್ಲಿ ಧೈರ್ಯ ತುಂಬಿಸುವಂತಹ ಕೆಲಸ ನಡೆಸಬೇಕು. ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಭಾತೃತ್ವವನ್ನು ಬೆಳೆಸಲು ಹಾಗೂ ಕೋಮು ಸೌಹಾರ್ದದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡುವಂತೆ ನೋಡಿಕೊಳ್ಳಬೇಕು.

2. ಕಾಲೇಜುಗಳಿಗೆ ಪೆÇಲೀಸ್ ಮುಖ್ಯಸ್ಥರು ಅಥವಾ ಅದಕ್ಕೆ ಸಮಾನವಾದ ಹುz್ದÉಯ ಅಧಿಕಾರಿಗಳು ಭೇಟಿ ನೀಡಿ ಲೈಂಗಿಕ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಸಂಭಾವ್ಯ ಅಪಾಯಗಳ ಸಂದರ್ಭದಲ್ಲಿ ಹೇಗೆ ಮಾಹಿತಿ ಒದಗಿಸುವುದು ಇತ್ಯಾದಿಗಳ ಬಗ್ಗೆ ತಿಳಿ ಹೇಳಬೇಕು. ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಇರುವ ಕಠಿಣ ಶಿಕ್ಷೆಯ ಬಗ್ಗೆ ವಿವರಿಸಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಡುವಿನ ಸ್ನೇಹ ಸಂಬಂಧವು ದುರುಪಯೋಗವಾಗಬಹುದಾದ ಹಂತದ ಬಗ್ಗೆ ವಿವರಿಸುವ ಯೋಜಿತ ಪ್ರಯತ್ನಗಳಾಗಬೇಕು.

3. ಮಹಿಳೆಯರು ಮತ್ತು ಯುವತಿಯರಿಗೆ ಬಸ್ಸು ಪ್ರಯಾಣದ ವೇಳೆ ಲೈಂಗಿಕ ದೌರ್ಜನ್ಯ ಸಹಜವೆಂಬಂತೆ ನಡೆಯುತ್ತಿದೆ. ಈ ಜಿಲ್ಲೆಯಲ್ಲಿ ವಿದ್ಯಾವಂತ ಹೆಣ್ಮಕ್ಕಳು ಅಧಿಕವಿದ್ದಾರೆ. ಆದ್ದರಿಂದ ಬಸ್ಸಿನಲ್ಲಿ ಮಹಿಳಾ ಮೀಸಲಾತಿ ಸೀಟುಗಳನ್ನು ಅಧಿಕಗೊಳಿಸಿ ಅವರಿಗೆ ಬಸ್ಸು ಪ್ರಯಾಣವನ್ನು ಸುರಕ್ಷಿತಗೊಳಿಸಬೇಕು.

4. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಇತ್ಯಾದಿ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಅಪಾಯವಿರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಇಂಥ ಕೃತ್ಯಗಳನ್ನು ನೆಪ ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನಗಳೂ ನಡೆಯುವುದಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು.

5. ಅತ್ಯಾಚಾರ-ಲೈಂಗಿಕ ದೌರ್ಜನ್ಯದಂಥ ಘಟನೆಗಳ ವೀಡಿಯೋಗಳು ಕ್ಷಿಪ್ರಗತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುವುದರಿಂದ ಈ ಬಗ್ಗೆ ನಿಗಾ ಅಗತ್ಯ. ವೀಡಿಯೋಗಳನ್ನು ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ನೀಡಬೇಕಾದ ಅಗತ್ಯ ಇದೆ. ಪುತ್ತೂರಿನ ಘಟನೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವುದಕ್ಕೆ ಜಿಐಓ ಕೃತಜ್ಞತೆ ಸಲ್ಲಿಸುತ್ತದೆ.