ಗೃಹಬಂಧನದಲ್ಲಿದ್ದಾಗಲೂ ಗೀಲಾನಿಗೆ ಇಂಟರ್ನೆಟ್: ಬಿಎಸ್‌ಎನ್‌ಎಲ್ ಸಿಬ್ಬಂದಿ ಅಮಾನತು

0
382

ಸನ್ಮಾರ್ಗ ವಾರ್ತೆ

ಶ್ರೀನಗರ, ಆ.20: ಆರ್ಟಿಕಲ್ 370 ರದ್ದುಪಡಿಸುವುದಕ್ಕಿಂತ ಮೊದಲು ‌ಗೈಹಬಂಧನದಲ್ಲಿರಿಸಿದ್ದ ಪ್ರತ್ಯೇಕತಾವಾದಿ ನಾಯಕ ಸಯ್ಯಿದ್ ಅಲಿ ಶಾ ಗೀಲಾನಿಗೆ ಇಂಟರ್ನೆಟ್ ಲಭ್ಯಗೊಳಿಸಿದ ಆರೋಪದಲ್ಲಿ ಇಬ್ಬರು ಬಿಎಸ್‌ಎನ್‌ಎಲ್‌ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಜಮ್ಮು ಕಾಶ್ಮೀರದ ವಾರ್ತಾ ಪ್ರಸಾರ ವ್ಯವಸ್ಥೆಗೆ ನಿಷೇಧ ಹೇರಿದ್ದ ದಿನಗಳಲ್ಲಿ ಗೀಲಾನಿಗೆ ಬಿಎಸ್‌ಎನ್‌ಎಲ್ ಇಂಟರ್ನೆಟ್ ಸೇವೆ ಲಭಿಸಿದ್ದು ಪತ್ತೆಯಾಗಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ  ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಪಡಿಸಿದ ಮಸೂದೆ ರಾಜ್ಯಸಭೆಯಲ್ಲಿ ಮಂಡಿಸುವ ಮೊದಲು ಆಗಸ್ಟ್ ನಾಲ್ಕರಿಂದ ಒಂದು ವಾರದವರೆಗೆ ರಾಜ್ಯದಲ್ಲಿ ವಾರ್ತಾ ಪ್ರಸಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ದಿನಗಳಲ್ಲಿ ಹುರಿಯತ್ ಪಾರ್ಟಿ ನಾಯಕ ಗೀಲಾನಿ ಸ್ವಂತ ಟ್ವೀಟರ್ ಅಕೌಂಟ್ ಉಪಯೋಗಿಸಿ ಟ್ವೀಟ್ ಮಾಡಿದ್ದರು. ಆಗಸ್ಟ್ ಎಂಟರಂದು ಬೆಳಿಗ್ಗೆಯವರೆಗೆ ಬ್ರಾಂಡ್‍ಬಾಂಡ್ ಇಂಟರ್ನೆಟ್ ಲ್ಯಾಂಡ್‌ಲೈನ್ ಸೇವೆಗಳು ಗೀಲಾನಿಗೆ ಲಭಿಸಿದ್ದವು.

ಗೀಲಾನಿಯ ಟ್ವೀಟ್ ನೋಡಿದ ಬಳಿಕ ಅಧಿಕಾರಿಗಳಿಗೆ ಇದು ಗೊತ್ತಾಯಿತು. ನಂತರ ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಸರಾರ ಗೀಲಾನಿಯ ಖಾತೆಯನ್ನು ಸಸ್ಪೆಂಡ್ ಮಾಡಲು ಟ್ವಿಟರ್‍‌ಗೆ ಮನವಿ ಸಲ್ಲಿಸಿತ್ತು. ಗೀಲಾನಿಯೊಬ್ಬರೇ ಹೇಗೆ ಇಂಟರ್‌ನೆಟ್ ಬಳಸಿದರು ಎಂದು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ. ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲರ ಸಹಿತ ಹಲವು ನಾಯಕರು ಈಗಲೂ ಗೃಹಬಂಧನದಲ್ಲಿದ್ದಾರೆ.