ಅಮೇರಿಕ| ಗ್ರೀನ್ ಕಾರ್ಡ್ ಮೇಲಿನ ನಿಷೇಧ ತೆರವುಗೊಳಿಸಿ ಜೋ ಬೈಡನ್ ಸುಗ್ರೀವಾಜ್ಞೆ; ಲಕ್ಷಾಂತರ ಭಾರತೀಯರಿಗೆ ರಿಲೀಫ್

0
131

ಸನ್ಮಾರ್ಗ ವಾರ್ತೆ

ಸ್ಯಾನ್ ಡಿಯಾಗೋ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಲಕ್ಷಾಂತರ ಭಾರತೀಯರನ್ನು ಚಿಂತೆಗೆ ದೂಡಿದ್ದ ಗ್ರೀನ್ ಕಾರ್ಡ್ ಮೇಲಿನ ಕಾನೂನಾತ್ಮಕ ವಲಸೆ ನೀತಿ ನಿರ್ಬಂಧವನ್ನು ನೂತನ ಅಧ್ಯಕ್ಷ ಜೊ ಬೈಡನ್ ತೆಗೆದುಹಾಕುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಜಗತ್ತಿನ ಹಲವು ದೇಶಗಳಿಂದ ಬರುವ ಪ್ರತಿಭಾವಂತರನ್ನು ತಡೆಯುವುದರಿಂದ ಇಲ್ಲಿರುವ ಉದ್ಯಮಗಳಿಗೆ ಸಾಕಷ್ಟು ನಷ್ಟವಾಗುತ್ತದೆ ಎಂದು ಬೈಡನ್ ಸುಗ್ರೀವಾಜ್ಞೆ ಹೊರಡಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಕೋವಿಡ್-19 ಹಿನ್ನೆಲೆಯಿಂದಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ದೇಶದ ಜನರಿಗೆ ಉದ್ಯೋಗ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್ ಅಂತ್ಯದವರೆಗೆ ಗ್ರೀನ್ ಕಾರ್ಡುಗಳ ವಿತರಣೆಯನ್ನು ನಿಲ್ಲಿಸಿದ್ದರು. ಈ ಆದೇಶವನ್ನು ಮುಂದಿನ ಮಾರ್ಚ್ ವರೆಗೆ ವಿಸ್ತರಿಸಿ ಡಿಸೆಂಬರ್ 31ರಂದು ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದರು.

ಕೋವಿಡ್-19ನಿಂದ ದೇಶದ ಪರಿಸ್ಥಿತಿ ಕಷ್ಟದಲ್ಲಿರುವಾಗ, ದೇಶದ ಉದ್ಯೋಗ ಮಾರುಕಟ್ಟೆ ಅಪಾಯದಲ್ಲಿದೆ ಎಂದೂ ವಲಸಿಗರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲಾಗಿತ್ತು. ಈ ನಿಟ್ಟಿನಲ್ಲಿ 10014 ಮತ್ತು 10052 ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.