ಅಮೆರಿಕ: ನೂತನ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕಾರ; ಮೊದಲ ದಿನವೇ 17 ಆದೇಶಗಳಿಗೆ ಅಂಕಿತ

0
278

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ನೀತಿಗಳನ್ನು ನೂತನ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಡೆಮಕ್ರಾಟಿಕ್ ಪಾರ್ಟಿಯ ನೇತಾರ ಜೊ ಬೈಡನ್ ತಿದ್ದುವ ಕೆಲಸ ಮಾಡಿದ್ದಾರೆ. ಪ್ರಮಾಣವ ಚನದ ಬಳಿಕ ಭಾರತೀಯ ಸಮಯ ಬೆಳಗ್ಗೆ ವೈಟ್‍ಹೌಸ್‍ಗೆ ಬಂದ ಬೈಡನ್ ಟ್ರಂಪ್‍ ಜಾರಿಗೊಳಿಸಿದ 17 ಆದೇಶಗಳನ್ನು ತಿದ್ದುವ ಮೂಲಕ ಸಹಿ ಹಾಕಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವುದು, ಪ್ಯಾರಿಸ್ ಹವಮಾನ ಒಪ್ಪಂದದಲ್ಲಿ ಪುನಃ ಸದಸ್ಯನಾಗುವುದು ಈ ಆದೇಶಗಳಿಗೆ ಮೊದಲು ಸಹಿ ಹಾಕಿದರು. ವೀಸಾ ನೀತಿಯಲ್ಲಿ ನಿರಾಶ್ರಿತರ ವಿಚಾರದಲ್ಲಿ ಹೆಚ್ಚು ಉದಾರ ಕ್ರಮ ಶೀಘ್ರವೇ ಜಾರಿಗೆ ಬರಲಿದೆ. ಮೆಕ್ಸಿಕೊ ಗಡಿಯ ಗೋಡೆ ನಿರ್ಮಾಣ ನಿಲ್ಲಿಸುವುದು, ವಲಸೆಗಾರರಿಗೆ ಸಂರಕ್ಷಣೆ ನೀಡುವುದು, ವಲಸೆ ನಿಷೇಧವನ್ನು ತೆರವುಗೊಳಿಸುವ ಆದೇಶಗಳಿಗೆ ಮೊದಲ ದಿನವೇ ಜೋ ಬೈಡನ್ ಸಹಿ ಹಾಕಿದ್ದಾರೆ.

ಇಂದು ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಉದಾರ ಕ್ರಮ ಜರಗಿಸಿದ್ದಾರೆ. ರಾಜಧಾನಿ ವಾಷಿಂಗ್ಟನ್ ಡಿಸಿಯ ಪಾರ್ಲಿಮೆಂಟ್ ಕಟ್ಟಡ ಕ್ಯಾಪಿಟಲ್‍ನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಜಾನ್ ರಾಬಟ್ರ್ಸ್ ಪ್ರಮಾಣ ವಚನ ಹೇಳಿಕೊಟ್ಟರು. 127 ವರ್ಷ ಹಳೆಯ ಕುಟುಂಬದ ಬೈಬಲಿಗೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದರು.

ತನ್ನ ಪ್ರಮಾಣ ವಚನ ದಿನವನ್ನು ಪ್ರಜಾಪ್ರಭುತ್ವದ ದಿನವಾಗಿ ಬೈಡನ್ ಕರೆದಿದ್ದಾರೆ. ಪ್ರಜಾಪ್ರಭುತ್ವ ಅಮೂಲ್ಯವಾಗಿದೆ ಎಂದು ಅಮೆರಿಕ ತೋರಿಸಿಕೊಟ್ಟಿದೆ. ಅಮೆರಿಕದಲ್ಲಿರುವ ವೈವಿಧ್ಯತೆಯನ್ನು ಮಾತಿನಲ್ಲಿ ಉದ್ಧರಿಸಿದರು. ವರ್ಣಭೇದ, ಆಂತರಿಕ ಭಯೋತ್ಪಾದನೆಯ ವಿರುದ್ಧ ಸನ್ನದ್ಧ ಎಂದು ಅವರು ಹೇಳಿದರು. ತಾನು ಎಲ್ಲ ಅಮೆರಿಕನ್ನರಿಗೂ ಅಧ್ಯಕ್ಷನಾಗಿರುವೆ ಎಂದು ಜೊ ಬೈಡನ್ ಭರವಸೆ ನೀಡಿದರು.