ಚೀನಾ ಗುಪ್ತಚರ ಸಂಸ್ಥೆಗೆ ಮಾಹಿತಿ ರವಾನೆ ಪ್ರಕರಣ: ಪತ್ರಕರ್ತ ರಾಜೀವ್ ಶರ್ಮಾ‌ಗೆ ಜಾಮೀನು

0
283

ಸನ್ಮಾರ್ಗ ವಾರ್ತೆ

ನವದೆಹಲಿ: ಚೀನಾದ ಗುಪ್ತಚರ ಸಂಸ್ಥೆಗೆ ಭಾರತದ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿಸಲ್ಪಟ್ಟ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಸೆಪ್ಟೆಂಬರ್‌ನಲ್ಲಿ ಚೀನಾದ ಮಹಿಳೆ ಮತ್ತು ಅವಳ ನೇಪಾಳದ ಸಹಚರರೊಂದಿಗೆ ರಾಜೀವ್‌ರನ್ನು ಬಂಧಿಸಲಾಗಿತ್ತು. ಇಬ್ಬರೂ ಶೆಲ್ ಕಂಪೆನಿಗಳ ಮೂಲಕ ಭಾರೀ ಮೊತ್ತದ ಹಣವನ್ನು ರಾಜೀವ್‌ಗೆ ನೀಡಿರುವುದಾಗಿ ಆರೋಪಿಸಿದ್ದರು.