ಸದ್ದು ಮಾಡುತ್ತಿದೆ ಆರ್ಥಿಕ ತಜ್ಞೆ, ಪತ್ರಕರ್ತೆ ಸುಚೇತ ದಲಾಲ್‍ರ ಟ್ವೀಟ್: ಶೇರು ಮಾರುಕಟ್ಟೆಯಲ್ಲಿ ಹೊಸ ವಂಚನೆ?

0
658

ಸನ್ಮಾರ್ಗ ವಾರ್ತೆ

ಮುಂಬೈ: ಭಾರತದ ಆರ್ಥಿಕ ತಜ್ಞರನ್ನು ಬೆಚ್ಚು ಬೀಳುವಂತೆ ಆರ್ಥಿಕ ವಿಷಯಗಳ ತಜ್ಞೆ ಹಾಗೂ ಪತ್ರಕರ್ತೆ ಸುಚೇತ ದಲಾಲ್‍ರವರು ಮಾಡಿದ ಟ್ವೀಟ್ ಭಾರೀ ಚರ್ಚೆಯಲ್ಲಿದೆ. ಶೇರು ಮಾರುಕಟ್ಟೆ ಹೊಸ ವಂಚನೆಗೆ ವೇದಿಕೆಯಾಗುತ್ತಿದೆ ಎಂದು ಸುಚೇತಾರವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ. ಅವರು ಯಾವುದೇ ಒಂದು ಕಾರ್ಪೊರೇಟ್ ಕಂಪೆನಿಯ ಹೆಸರನ್ನು ಹೇಳಿಲ್ಲ. ಆದರೆ ಟ್ವೀಟ್‍ನ ಬೆನ್ನಿಗೆ ಗೌತಂ ಅದಾನಿ ಕಂಪೆನಿಯತ್ತ ಸಂದೇಹ ವ್ಯಾಪಕವಾಗಿದೆ.

ಒಂದು ವರ್ಷದಲ್ಲಿ ಏಷ್ಯದಲ್ಲೇ ಶ್ರೀಮಂತರಲ್ಲೇ ಎರಡನೇ ಸ್ಥಾನವನ್ನು ಅದಾನಿ ಗಳಿಸಿಕೊಂಡಿದ್ದು, ಗೌತಂ ಅದಾನಿಯ ನಿಯಂತ್ರಣದಲ್ಲಿರುವ ಕಂಪೆನಿಯ ಶೇರು ಬೆಲೆ ದುಪ್ಪಟ್ಟಿಗೂ ಹೆಚ್ಚಳವಾಗಿದ್ದು ಕಾರಣವಾಗಿ ತೋರಿಸಲಾಗುತ್ತಿದೆ. ಈ ವರ್ಷ ಅವರ ಸಂಪತ್ತಿನಲ್ಲಿ ಮೂರು ಲಕ್ಷ ಕೋಟಿರೂಪಾಯಿ ಹೆಚ್ಚಳವಾಗಿದ್ದು ಇದರೊಂದಿಗೆ ಸುಚೇತಾರ ಟ್ವೀಟ್‍ನ ಮೊನೆ ಅದಾನಿಯೆಡಿಗೆ ಇದೆ ಎಂದು ಮೂಲಗಳು ಹೇಳಿವೆ.

” ಶೇರು ಮಾರುಕಟ್ಟೆ ಇನ್ನೊಂದು ಹಗರಣಕ್ಕೆ ಸಾಕ್ಷಿಯಾಗುತ್ತಿದೆ. ಶೇರು ಮಾರುಕಟ್ಟೆಯಲ್ಲಿನ ಮೋಸವನ್ನು ಸಾಬೀತು ಪಡಿಸಲು ಕಷ್ಟವಾದರೂ ಸೆಬಿ ಈ ಶೇರುಗಳನ್ನು ಟ್ರಾಕ್ ಮಾಡುತ್ತಿದೆ. ಒಂದು ಗ್ರೂಪ್‍ನ ಶೇರು ಬೆಲೆ ಕೃತಕವಾಗಿ ಹೆಚ್ಚಿಸುವ ಕೆಲಸವನ್ನು ಆಪರೇಟರ್ಸ್ ಮಾಡುತ್ತಿದ್ದಾರೆ. ಅದು ವಿದೇಶಿ ಸಂಸ್ಥೆಗಳ ಮೂಲಕ . ಅದರ ವಿಶೇಷತೆಯೇನೆಂದರೆ ಏನೂ ಬದಲಾಗದಿರುವುದು ಆಗಿದೆ” ಎಂದು ಸುಚೇತ ಟ್ವೀಟ್ ಮಾಡಿದ್ದಾರೆ.

ಆದರೂ ಗ್ರೂಪಿನ ಹೆಸರನ್ನಾಗಲಿ, ಇತರ ವಿವರಗಳನ್ನಾಗಲಿ ಸುಚೇತ ಹೇಳೀಲ್ಲ. ಆದರೂ ಒಂದು ಸಂಸ್ಥೆಯ ಶೇರು ವಹಿವಾಟಿನ ಮೋಸದಾಟದ ಬಗ್ಗೆ ಅವರು ಶೇರು ಹೂಡಿಕೆದಾರರಿಗೆ ಈ ರೀತಿಯಲ್ಲಿ ಸೂಚನೆ ನೀಡಿದ್ದಾರೆ. ಹಳೆಯ ಆಪರೇಟರ್ ಕಾರಣ ಶೇರುಗಳ ಬೆಲೆ ಹೆಚ್ಚುತ್ತಿದೆ. ಶೇರು ದಲ್ಲಾಳಿಯಾಗಿದ್ದ ಕೇತನ್ ಪರೇಕ್‍ರಂತೆ ಒಬ್ಬರು ಈಗಲೂ ಸಕ್ರಿಯವಾಗಿದ್ದಾರೆ. ಅದರ ಮೂಲಕ ಅವರು ಬಯಸುವ ಶೇರುಗಳ ಮೌಲ್ಯವನ್ನು ಹೆಚ್ಚಳಗೊಳಿಸುತ್ತಿದ್ದಾರೆ. ಆದರೂ ಇದರಲ್ಲಿ ಮೋಸ ಇದೆಯೋ ಇಲ್ಲವೋ ಎಂದು ಸಾಬೀತುಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಸುಚೇತಾರ ಟ್ವೀಟ್‍ನ ಸಾರಾಂಶವಾಗಿದೆ.

ಸುಚೇತಾರ ಟ್ವೀಟ್ ಅದಾನಿಯನ್ನು ಗುರಿಯಾಗಿರಿಸಿಕೊಂಡಿದ್ದೆಂದು ಹಲವು ತಜ್ಞರು ಹೇಳುತ್ತಾರೆ. ಅದಕ್ಕೆ ಕಾರಣ ಅದಾನಿ ಗ್ರೂಪ್‍ನ ಕಳದ ವರ್ಷದ ಬೆಳವಣಿಗೆ, ಅದಾನಿಯ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದವರಿಗೆ ಇರುವ ಮುನ್ನೆಚ್ಚರಿಕೆಯಿದೆಯೆಂದು ಹಲವರ ವಾದ. ಆದರೆ, ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯ ಇಲ್ಲದ್ದರಿಂದ ಹಗರಣವನ್ನು ಸಾಬೀತುಪಡಿಸಲು ಸಾಧ್ಯವಿಲ್ಲದ ಸ್ಥಿತಿಯಿದೆ.