ತಬ್ಲೀಗಿ ಹೆಸರಲ್ಲಿ ಮುಸ್ಲಿಂ ಸಮುದಾಯಕ್ಕೆ ಮಸಿ: ಮಾಧ್ಯಮದ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಜಮೀಯತೆ ಉಲಮಾಯೆ ಹಿಂದ್

0
600

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ 7- ಕಳೆದ ತಿಂಗಳು ದೆಹಲಿಯಲ್ಲಿ ನಡೆದ ತಬ್ಲಿಗೀ ಜಮಾಅತ್ ಅನ ಸಮ್ಮೇಳನದ ಹೆಸರಲ್ಲಿ ಮಾಧ್ಯಮದ ಒಂದು ವರ್ಗವು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡುತ್ತಿದ್ದು ಇಂತಹ ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಯುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಅಂತ ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ಜಮೀಯತೆ ಉಲಮಾಯೆ ಹಿಂದ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ಜಮೀಯತೆ ಉಲಮಾಯೆ ಹಿಂದ್ ನ ಪರವಾಗಿ ನ್ಯಾಯವಾದಿ ಎಜಾಜ್ ಮಕ್ಬೂಲ್ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ತಬ್ಲೀಗಿ ಜಮಾಅತ್ ನ ಸಮೀಲನದಿಂದಾಗಿ ಏನು ನಡೆದಿದೆಯೋ ಅದು ದುರದೃಷ್ಟಕರ ಮತ್ತು ಅದರ ಹೆಸರಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಅನ್ಯಾಯ ಎಂದವರು ಹೇಳಿದ್ದಾರೆ.

ತಬ್ಲೀಗಿ ಜಮಾಅತಿನ ಹೆಸರಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸಮಾಜದ ಕೋಮು ಸೌಹಾರ್ದ ವಾತಾವರಣಕ್ಕೆ ಹೊಡೆತವನ್ನು ನೀಡಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮಾಧ್ಯಮದ ಎಲ್ಲ ವಿಭಾಗಗಳು ಜವಾಬ್ದಾರಿಯವಾಗಿ ವರ್ತಿಸಬೇಕೆಂದು ಖಚಿತವಲ್ಲದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದೂ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.