ಕಾಬಾದ ಮೆಟ್ಟಲುಗಳಿಂದ ಇಳಿದು ಬರುತ್ತಿರುವ ಇಮ್ರಾನ್ ಖಾನ್: ಪಾಕ್ ನಲ್ಲಿ ರೋಮಾಂಚನ

0
1567

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರು ಕಳೆದ ವಾರ ಮಕ್ಕಾಕ್ಕೆ ಭೇಟಿ ಇತ್ತ ವೇಳೆ ಅವರನ್ನು ಕಾಬಾದ ಬಾಗಿಲು ತೆರೆದು ಒಳಗೆ ಪ್ರವೇಶ ನೀಡಲಾಗಿರುವುದನ್ನು ವಿಶೇಷ ಗೌರವವಾಗಿ ಪರಿಗಣಿಸಲಾಗಿದ್ದು, ಇದು ಪಾಕ್ ನಲ್ಲಿ ವ್ಯಾಪಕ ಪ್ರಶಂಸೆ ಮತ್ತು ಇಮ್ರಾನ್ ಖಾನ್ ರ ಧಾರ್ಮಿಕ ಬದ್ಧತೆಗೆ ಸಿಕ್ಕ ಮಾನ್ಯತೆಯಾಗಿ ಪ್ರಶಂಸೆಗೀಡಾಗಿದೆ.

ಅವರು ಕಾಬಾದ ಮೆಟ್ಟಲುಗಳಿಂದ ಇಳಿದು ಬರುತ್ತಿರುವ ಫೋಟೋವನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ಪಾಕಿಸ್ತಾನದಲ್ಲಿ ಈ ಫೋಟೋ ಎಲ್ಲೆಡೆಯೂ ಕಂಡುಬರುತ್ತಿದೆ.

ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಮ್ರಾನರನ್ನು ಮಕ್ಕಾದ ಉಪ ಅಮೀರ್ ರಾಜಕುಮಾರ ಅಬ್ದುಲ್ಲಾ ಬಿನ್ ಬಂದರ್ ಮತ್ತು ಮಂತ್ರಿ ಮಂಡಲದ ಸಚಿವರು ಹಾರ್ದಿಕವಾಗಿ ಬರಮಾಡಿಕೊಂಡಿದ್ದರು.