ಕಾಂಗ್ರೆಸ್‍ಗೆ ಮರಳಲು ಸಿದ್ಧರಾದ ಎಎಪಿ ಶಾಸಕಿ ಅಲ್ಕಾ ಲಾಂಬ

0
546

ಹೊಸದಿಲ್ಲಿ, ಮಾ.22: ಕಾಂಗ್ರೆಸ್‍ಗೆ ಮರಳುವ ಬಯಕೆಯನ್ನು ಎ ಎ ಪಿ ಶಾಸಕಿ ಅಲ್ಕಾ ಲಾಂಬ ವ್ಯಕ್ತಪಡಿಸಿದ್ದಾರೆ. ಆಂತರಿಕ ಪ್ರಜಾಪ್ರಭುತ್ವದ ಕೊರತೆ ಎ ಎ ಪಿ ಯಲ್ಲಿದೆ. ಆದ್ದರಿಂದ ಕಾಂಗ್ರೆಸ್ಸಿನೊಂದಿಗೆ ಸಖ್ಯ ಮಾಡಿಕೊಳ್ಳಲು ನಿರ್ಬಂಧಿಸುವ ಸ್ಥಿತಿ ಇದೆ ಎಂದು ಅಲ್ಕಾ ಲಾಂಬ ಆರೋಪಿಸಿದರು. ತನ್ನನ್ನು ಕಾಂಗ್ರೆಸ್‍ಗೆ ಸ್ವಾಗತಿಸಿದ ನಾಯಕರಿಗೆ ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿದರು.

ಆಮ್ ಆದ್ಮಿ ನಾಯಕರೊಡನೆ ಅಸಮಾಧಾನದಿಂದಾಗಿ ಅಲ್ಕಾ ಲಾಂಬ ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಕಾಂಗ್ರೆಸಿನೊಳಗೆ ಆಂತರಿಕ ಪ್ರಜಾಪ್ರಭುತ್ವವಿದೆ ಎಂದು ಅವರು ಹೇಳಿದರು. ಎಎಪಿ ದುರ್ಬಲಗೊಂಡಿದ್ದರಿಂದ ಕಾಂಗ್ರೆಸ್ಸಿನೊಂದಿಗೆ ಸಖ್ಯ ಮಾಡಿಕೊಳ್ಳಬೇಕೆಂದು ಯಾವಾಗಲೂ ಹೇಳುತ್ತಾ ಬಂದಿದ್ದೇನೆ. ರಾಜೀವ್ ಗಾಂಧಿಗೆ ನೀಡಿದ ಭಾರತ ರತ್ನವನ್ನು ಹಿಂಪಡೆಯಬೇಕೆಂದು ದಿಲ್ಲಿ ಸರಕಾರ ಪ್ರಸ್ತಾವ ಪಾಸು ಮಾಡಿದ ಬಳಿಕ ಅಲ್ಕಾ ಲಾಂಬ ಎಎಪಿಯೊಂದಿಗೆ ಮುನಿಸಿಕೊಂಡಿದ್ದಾರೆ.

ಅಲ್ಕಾ ಎನ್‍ಎಸ್‍ಯುನಲ್ಲಿ ಸಕ್ರಿಯಳಾಗಿದ್ದ ನಾಯಕಿಯಾಗಿದ್ದು 2013ರಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರಿದ್ದರು. ಕಾಂಗ್ರೆಸ್ ಸೇರುವ ವದಂತಿಗಳ ನಡುವೆ ಕಾಂಗ್ರೆಸ್‍ನ ದಿಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಕಾರ್ಯದರ್ಶಿ ಪಿ.ಸಿ. ಚಾಕೊ ಅಲ್ಕಾರನ್ನು ಕಾಂಗ್ರೆಸ್‍ಗೆ ಸ್ವಾಗತಿಸಿದ್ದಾರೆ.