ಕಲ್ಬುರ್ಗಿ ಹಂತಕನನ್ನು ಗುರುತಿಸಿದ ಪತ್ನಿ ಉಮಾದೇವಿ; ಆತನನ್ನು ಕಂಡ ಕೂಡಲೇ ಕುಸಿದುಬಿದ್ದರು

0
1917

ಸನ್ಮಾರ್ಗ ಜು. 19, 2019

ಬೆಂಗಳೂರು,ಜು. 19: ಸಾಹಿತಿ ಎಂಎಂ ಕಲ್ಬುರ್ಗಿಯ ಕೊಲೆಗಡುಕನನ್ನು ಪತ್ನಿ ಉಮಾದೇವಿ ಗುರುತಿಸಿದ್ದಾರೆ. ಗೌರಿ ಲಂಕೇಶ್ ಕೊಲೆ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ಗಣೇಶ್ ಮಿಸ್ಕ್(27)ನನ್ನು ಉಮಾದೇವಿ ಗುರುತಿಸಿದ್ದು ಬುಧವಾರ ಧಾರವಾಡದಲ್ಲಿ ನಡೆದ ಗುರುತು ಪತ್ತೆಹಚ್ಚುವ ಪರೇಡಿನಲ್ಲಿ ಉಮಾದೇವಿ ಮತ್ತು ಇನ್ನೊಬ್ಬ ಸಾಕ್ಷಿ ಗುರುತಿಸಿದ್ದಾರೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

ಗಣೇಶ್‍ನನ್ನು ಕಂಡ ಕೂಡಲೇ ಉಮಾದೇವಿ ಕುಸಿದು ಬಿದ್ದರು. ಆರೋಪಿಯನ್ನು ಅವರು ಗುರುತಿಸಿದ್ದು ಆರೋಪಿಯ ಹೆಸರನ್ನು ನಮಗೆ ತಿಳಿಸಿಲ್ಲ ಎಂದು ಕಲ್ಬುರ್ಗಿಯ ಪುತ್ರ ಶ್ರೀವಿಜಯ್ ಕಲ್ಬುರ್ಗಿ ಹೇಳಿದರು. 2015 ಆಗಸ್ಟ್ 30ರಂದು ಬೆಳಗ್ಗೆ ಧಾರವಾಡದ ಮನೆಯಲ್ಲಿ ಗಣೇಶ್ ಮಿಸ್ಕ್ ಬಾಗಿಲು ತಟ್ಟಿದಾಗ ಬಾಗಿಲು ಉಮಾದೇವಿ ತೆರದಿದ್ದರು. ನಂತರ ಗಣೇಶ ಕಲ್ಬುರ್ಗಿಯನ್ನು ಭೇಟಿಯಾಗಬೇಕೆಂದು ಹೇಳಿದ್ದ. ಕಲ್ಬುರ್ಗಿ ಬಂದೊಡನೆ ಅವರ ತಲೆಗೆ ಗಣೇಶ ಗುಂಡು ಹಾರಿಸಿದ್ದ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂ ಸನಾತನ ಸಂಸ್ಥೆಯೊಂದಿಗೆ ಸಂಬಂಧ ಇರುವ ಗಣೇಶನನ್ನು ಎಸ್‍ಐಟಿ ಪೊಲೀಸರು ಬಂಧಿಸಿದ್ದರು.