ಎಂ.ಜಿ.ಆರ್ ವಿಧಾನಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿರುವ ಕಮಲ್ ಹಾಸನ್

0
110

ಸನ್ಮಾರ್ಗ ವಾರ್ತೆ

ಚೆನ್ನೈ: ಮಕ್ಕಳ್ ನೀದಿ ಮಯ್ಯಂ(ಎಂಎನ್‍ಎಂ) ಪಕ್ಷದ ಅಧ್ಯಕ್ಷ ನಟ ಕಮಲ್ ಹಾಸನ್ ತಮ್ಮ ಜೀವನದಲ್ಲಿ ಮೊದಲ ಬಾರಿ ಚುನವಣಾ ಕಣಕ್ಕಿಳಿಯಲಿದ್ದು ಚೆನ್ನೈ ರಾಮಪುರದ ಎಂ.ಜಿ.ಆರ್ ವಸತಿ ಇರುವ ಆಲಂದೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕ್ಷೇತ್ರವಿಡಿ ಕಮಲ್ ಹಾಸನ್‍ರ ಬ್ಯಾನರ್ ಹಾಗೂ ಪೋಸ್ಟರ್‌ಳಿಂದ ತುಂಬಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಲಂದೂರ್ ವಿಧಾನಸಭಾ ಸಹಿತ ಶ್ರೀ ಎರುಂಬುತ್ತೂರಿನಲ್ಲಿ ಮಕ್ಕಳ್ ನೀದಿ ಮಯ್ಯಂ ಅಭ್ಯರ್ಥಿಗೆ 1.3 ಲಕ್ಷ ಮತಗಳು ಸಿಕ್ಕಿತ್ತು. ಇದರಲ್ಲಿ ಅಲಂದೂರಿನಲ್ಲಿ 22,000 ವೋಟುಗಳು ಸಿಕ್ಕಿದವು. ಎಂಜಿಆರ್ ನಿಜವಾದ ಉತ್ತರಾಧಿಕಾರಿ ತಾನೆಂದು ಕಮಲ್ ಹೇಳಿಕೊಳ್ಳುತ್ತಿರುವುದು ದ್ರಾವಿಡ ಮುನ್ನೇತ್ರಂಗಳಲ್ಲಿ ಆತಂಕ ಸೃಷ್ಟಿಸಿದೆ. 1967, 1971 ವರ್ಷಗಳಲ್ಲಿ ಎಂಜಿಆರ್ ಚುನಾವಣೆಯಲ್ಲಿ ಆಲಂದೂರಿನಿಂದ ಗೆದ್ದಿದ್ದಾರೆ. ಅಂದು ಈ ವಿಧಾನಸಭಾ ಕ್ಷೇತ್ರಕ್ಕೆ ಪರಂಗಿಮಲ ಎಂಬ ಹೆಸರು ಇತ್ತು. ಕಮಲ್ ಹಾಸನ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದು, ಇನ್ನೊಂದು ಕ್ಷೇತ್ರ ಕೋಯಮತ್ತೂರು ದಕ್ಷಿಣ ಆಗುವ ಸಾಧ್ಯತೆ ಇದೆ.