ಅಮೆರಿಕನ್ ಪ್ರತಿನಿಧಿ ಸಭೆಗೆ ರಾಜ್ಯದಿಂದಲೂ ಒಬ್ಬರು

0
403

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.6: ಮೂಲತಃ ಕರ್ನಾಟಕದವರಾದ ಶ್ರೀ ಥಾಣೆದಾರ್ ಅಮೆರಿಕದ ಜನಪ್ರತಿನಿಧಿ ಸಭೆ ಕಾಂಗ್ರೆಸ್‍ಗೆ ಮಿಷಿಗನ್‍ನಿಂದ ಡೆಮಕ್ರಾಟಿಕ್ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ಅವರಿಗೆ ಶೇ.93 ಮತಗಳು ಲಭಿಸಿವೆ. ಈಗ ಅವರು ಅಮೆರಿಕದಲ್ಲಿ ಉದ್ಯಮಿಯಾಗಿದ್ದಾರೆ.

‘ಪ್ರಧಾನ ಚುನಾವಣೆಯಲ್ಲಿ ನಿಮ್ಮ ಬೆಂಬಲ, ಮತಗಳಿಗೆ ಕೃತಜ್ಞತೆ. ಡೆಮಕ್ರಾಟಿಕ್ ಥರ್ಢ್ ಡಿಸ್ಟ್ರಿಕ್ಟ್ ನಿವಾಸಿಗಳಿಗೂ ಕುಟುಂಬಗಳಿಗೂ, ಗೆಳೆಯರಿಗೂ ಬೆಂಬಲಿಸಿದ್ದಕ್ಕಾಗಿ ಕೃತಜ್ಞತೆಗಳು ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

1955ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಇವರು 1977ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಕಲಿತು 1979ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅಮೆರಿಕದ ಒಹಿಯೊ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ಪಡೆದಿದ್ದಾರೆ.

ಎಲ್ಲ ಜನರ ಜೀವನ ಮಟ್ಟ ಉನ್ನತಕ್ಕೇರಿಸಲು ಯತ್ನಿಸುವೆ. ಜನರ ಬೆಂಬಲ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.