ಖಾಸಗಿ ಆಸ್ಪತ್ರೆಗಳು ತಮ್ಮದೇ ಕೋವಿಡ್ ಕೇರ್ ಸೆಂಟರ್‌ ಆರಂಭಿಸಬಹುದು: ಆರೋಗ್ಯ ಇಲಾಖೆ ಆದೇಶ

0
530

ಸನ್ಮಾರ್ಗ ವಾರ್ತೆ

ಬೆಂಗಳೂರು, ಜು.190: ಮಧ್ಯಮ ಮತ್ತು ತೀವ್ರತರವಾದ ಪ್ರಕರಣಗಳಿಗೆ ಬೆಡ್‌ಗಳನ್ನು ಒದಗಿಸಲು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕೋವಿಡ್-19 ಕೇರ್ ಸೆಂಟರ್‌ಗಳಲ್ಲಿ (ಸಿಸಿಸಿ) ಸ್ಥಾಪಿಸಲು ಕರ್ನಾಟಕ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ನೀಡಿದೆ.

“ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕೋವಿಡ್-19 ಕೇರ್ ಸೆಂಟರ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅವಕಾಶ ನೀಡಲಾಗುವುದು. ಈ ಹೆಚ್ಚಿನ ವ್ಯವಸ್ಥೆಯು COVID-19 ನಿಂದ ಮಧ್ಯಮ ಅಥವಾ ತೀವ್ರವಾಗಿ ಬಾಧಿತರಾದವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯನ್ನು ಸುಧಾರಿಸುತ್ತದೆ” ಎಂದು ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದ್ದರು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಅಡಿಯಲ್ಲಿ ನೋಂದಾಯಿಸಲಾದ ಖಾಸಗಿ ಆಸ್ಪತ್ರೆಗಳಿಗೆ, ಹೋಟೆಲ್‌ಗಳು ಮತ್ತು ವಸತಿ ಸೌಲಭ್ಯಗಳ ಸಹಯೋಗದೊಂದಿಗೆ ಕೋವಿಡ್-19 ಕೇರ್ ಸೆಂಟರ್‌ಗಳಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುವುದು.

ಖಾಸಗಿ ಕೋವಿಡ್-19 ಕೇರ್ ಸೆಂಟರ್‌ಗಳಲ್ಲಿನ ಚಿಕಿತ್ಸೆಯ ಬೆಲೆಯನ್ನು ಬಜೆಟ್ ಹೋಟೆಲ್‌ಗಳು, ತ್ರೀ-ಸ್ಟಾರ್ ಹೋಟೆಲ್‌ಗಳು ಮತ್ತು 5- ಸ್ಟಾರ್ ಹೋಟೆಲ್‌ಗಳಂತಹ ಮೂರು ವಿಭಾಗಗಳ ಅಡಿಯಲ್ಲಿ ಸರ್ಕಾರ ನಿಗದಿಪಡಿಸಿದೆ.

ಬಜೆಟ್‌ನಲ್ಲಿ ದಿನಕ್ಕೆ ಗರಿಷ್ಠ ಶುಲ್ಕ 8,000 ರೂ, ತ್ರೀ-ಸ್ಟಾರ್ ಕೋವಿಡ್-19 ಕೇರ್ ಸೆಂಟರ್‌‌ನಲ್ಲಿ 10,000 ರೂ ಮತ್ತು ಪಂಚತಾರಾ ಕೋವಿಡ್-19 ಕೇರ್ ಸೆಂಟರ್‌ನಲ್ಲಿ 12,000 ರೂ. ನಿಗದಿಯಾಗಿದೆ.

ಚಿಕಿತ್ಸೆಯ ಸಮಯದಲ್ಲಿ, ಹೋಟೆಲ್ ಸಿಬ್ಬಂದಿಗಳಾದ ಅಡುಗೆಯವರು ಮತ್ತು ಇತರರು ಕೋವಿಡ್ ರೋಗಿಗಳೊಂದಿಗೆ ಸಂಪರ್ಕಕ್ಕೆ ಬರಬಾರದು.

“ಆಹಾರ ವಿತರಣಾ ಸಿಬ್ಬಂದಿ ಮತ್ತು ಇತರರು ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಮೇಲ್ವಿಚಾರಣೆ ಮತ್ತು ಆರೈಕೆಯಡಿಯಲ್ಲಿ ಕೊಠಡಿಗಳಲ್ಲಿ ಸೇವೆ ಸಲ್ಲಿಸುತ್ತಾರೆ ಆರೋಗ್ಯ ಸಿಬ್ಬಂದಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ಸ್ಥಿತಿಯನ್ನು ಪ್ರತಿದಿನ ಮೂರು ಬಾರಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು 24 ಗಂಟೆಯೂ ಲಭ್ಯವಿರುತ್ತಾರೆ” ಎಂದು ಅವರು ಹೇಳಿದರು.

ಎಲ್ಲಾ ಖಾಸಗಿ ಆಸ್ಪತ್ರೆಯ ಕೋವಿಡ್-19 ಕೇರ್ ಸೆಂಟರ್‌ಗಳು ದೈನಂದಿನ ವರದಿಗಳನ್ನು ಸಲ್ಲಿಸಬೇಕು ಮತ್ತು ರೋಗಿಗಳ ಬಗ್ಗೆ ಆರೋಗ್ಯ ಇಲಾಖೆಗೆ ನವೀಕರಿಸಬೇಕು, ಈ ಮೊದಲು ಕೋವಿಡ್-19 ಕೇರ್ ಸೆಂಟರ್‌ಗಳಿಗೆ ನೀಡಲಾದ ಇತರ ಎಲ್ಲಾ ಸಂಬಂಧಿತ ನಿರ್ದೇಶನಗಳು ಸಹ ಇದರೊಂದಿಗೆ ಅನ್ವಯವಾಗುತ್ತವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.